ಕೊಪ್ಪಳ: ಬಿಜಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಬೋದೂರು ತಾಂಡಾದಲ್ಲಿರುವ ಐವರು ಲಿಂಗತ್ವ ಅಲ್ಪಸಂಖ್ಯಾತರ ಮನೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್ ಗುರುವಾರ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಪಾಲ್ಗೊಂಡು ವೇತನ ಪಡೆಯುವ ಮೂಲಕ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಅನುವು ಮಾಡಿಕೊಡುವ ನರೇಗಾ ಯೋಜನೆಯ ವಿಶೇಷ ವರ್ಗದ ಜಾಬ್ ಕಾರ್ಡ್ ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಿಂಗತ್ವ ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. ಇತ್ತೀಚೆಗೆ, ಮೂವರು ಲಿಂಗತ್ವ ಅಲ್ಪಸಂಖ್ಯಾತರನ್ನು ಶಿಕ್ಷಕರಾಗಿ ಆಯ್ಕೆ ಮಾಡಲಾಗಿದೆ. ಆದ್ದರಿಂದ ತಾಲೂಕಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ನಡೆಸಿದಾಗ, ಈ ತಾಂಡಾದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಐದು ಮನೆಗಳಿರುವುದು ಕಂಡುಬಂದಿದೆ, ಅವರನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಲ್ಲಿ ಭಾಗವಹಿಸಲು ಮನವೊಲಿಸಲಾಯಿತು ಮತ್ತು ಬಿಜಕಲ್ ಗ್ರಾಮ ಪಂಚಾಯತ್ ನಿಂದ ಅವರಿಗೆ ನರೇಗಾ ಜಾಬ್ ಕಾರ್ಡ್ ಗಳನ್ನು ಸಹ ನೀಡಲಾಯಿತು.
ಗಂಗಾವತಿ ತಾಲೂಕಿನ ಬಸಪಟ್ಟಣ ಗ್ರಾಮದ ಶರಣಮ್ಮ ಅವರು ಈಗಾಗಲೇ ನರೇಗಾದಡಿ ಕೆಲಸ ಮಾಡಿ ಗೌರವಯುತ ಜೀವನ ನಡೆಸುವ ಮೂಲಕ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾದರಿಯಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ ಎಂದು ಅವರು ಹೇಳಿದರು. ‘ನರೇಗಾ ಜಾರಿಯಾಗಿ 16 ವರ್ಷ ಕಳೆದರೂ ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯಲ್ಲಿ ಭಾಗವಹಿಸಿಲ್ಲ.