ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ ಬಸ್‍ಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕರ್ನಾಟಕದ ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಅಲ್ಲಿನ ಪುಂಡರು ಮಸಿ ಬಳಿದಿದ್ದಾರೆ.
ಈಗ ಮಹಾರಾಷ್ಟ್ರ ಬಸ್‍ಗಳಿಗೂ ಕರ್ನಾಟಕದಲ್ಲಿ ಕಪ್ಪು ಮಸಿ ಬಳಿಯೂ ಭೀತಿ ಹಿನ್ನೆಲೆ ಏಕಾಏಕಿ 300ಕ್ಕೂ ಅಧಿಕ ಬಸ್‍ಗಳ ಸಂಚಾರವನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಥಗಿತಗೊಳಿಸಿದೆ. ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ಎಮ್‍ಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸುತ್ತಿದ್ದವು. ಆದರೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಎಂದಿನಂತೆ ಬಸ್‍ಗಳು ತೆರಳುತ್ತಿವೆ.
Laxmi News 24×7