ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಬೆಳೆದು ನಿಂತ ರೈತರ ಬೆಳೆಗಳನ್ನು ತೇರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಥಣಿ ತಹಶೀಲ್ದಾರ್ ಸುರೇಶ್ ಮುಂಜೆ ಹಾಗೂ ಐಗಳಿ ಪೋಲಿಸ್ ಠಾಣೆ ಪಿಎಸ್ಐ ಎಸ್ ಎಚ್ ಪವಾರ ಅವರ ನೇತೃತ್ವದಲ್ಲಿ ಜೆಸಿಬಿ ಮುಖಾಂತರ ಬೆಳೆ ತೆರವುಗೊಳಿಸಿ ರೈತರು ಮೇಲೆ ಅಧಿಕಾರ ದರ್ಪ ಮೆರೆದಿದ್ದಾರೆ ಎಂಬ ಗಂಭಿರ ಆರೋಪ ಕೇಳಿ ಬಂದಿದೆ.
ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಸರ್ವೆ ನಂಬರ್ 1138 ರಲ್ಲಿ 20 ಜನ ರೈತರು ರಸ್ತೆ ಅತಿಕ್ರಮಣ ಮಾಡಿ ಬೆಳೆ ಬೆಳೆದಿದ್ದನ್ನ ರೈತರಿಗೆ ಮಾಹಿತಿ ನೀಡಿದೆ, ಜೆಸಿಬಿ ಯಂತ್ರ ಮೂಲಕ ನಾಶಪಡಿಸಿದ್ದಾರೆ, ನಮಗೆ ಸರ್ವೆ ಮಾಡುತ್ತೇವೆ ಎಂದು ನೋಟಿಸ್ ಜಾರಿ ಮಾಡಿ ಪೊಲೀಸ್ ಇಲಾಖೆ ಬಳಸಿಕೊಂಡು ಅಥಣಿ ತಹಶೀಲ್ದಾರ್ ಸುರೇಶ್ ಮುಂಜೆ ಹಾಗೂ ಐಗಳಿ ಪಿಎಸ್ಐ ಎಸ್ ಎಚ್ ಪವಾರ್ ಬೆಳೆ ನಾಶಪಡಿಸಿದ್ದಾರೆಂದು ರೈತರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 40 ವರ್ಷಗಳ ಹಿಂದೆ ಈ ರಸ್ತೆ ಕೃಷಿ ಜಮೀನುಗಳಾಗಿ ಮಾರ್ಪಟ್ಟಾಗಿದೆ. ನಾವು ರಸ್ತೆ ನಿರ್ಮಾಣಕ್ಕೆ ಯಾವುದೇ ತಡೆಯನ್ನು ಒಡ್ಡುವುದಿಲ್ಲ. ಬೆಳೆದ ಬೆಳೆಯನ್ನು ತೆಗೆದುಕೊಳ್ಳುತ್ತೇವೆ ಕಾಲಾವಕಾಶ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದಕ್ಕೂ ಸ್ಪಂದಸದೆ ಜೆಸಿಬಿ ಮೂಲಕ ಬೆಳೆ ನಾಶಪಡಿಸಲಾಗಿದೆ ಎಂದು ರೈತರಾದ ಸಾಬು ಮಾಳಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.