ಅಥಣಿ: ಮನಷ್ಯ ಮನಸ್ಸು ಮಾಡಿದರೇ ಯಾವುದೂ ಅಸಾಧ್ಯವಲ್ಲ. ಕಳೇದ ಮೂರು ದಿನಗಳಿಂದ ಸತ್ತಿ ಗ್ರಾಮದಲ್ಲಿ ಪ್ರತಿ ದಿನ ಬೆಳೆಗ್ಗೆ ‘ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ’ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಯುವಕರು ಸ್ವಯಂ ಪ್ರೇರಿತರಾಗಿ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿದ್ದಾರೆ.
ಇದವೇ ಗ್ರಾಮದ ನಿಜವಾದ ಪರಿವರ್ತನೆ ಎಂದು ಗುಣದಾಳ ಕಲ್ಯಾಣ ಮಠದ ವಿವೇಕಾನಂದ ದೇವರು ಹೇಳಿದರು.
ಸಮೀಪದ ಸತ್ತಿ ಗ್ರಾಮದಲ್ಲಿ ಬಾಳಕೃಷ್ಣ ಮಹಾರಾಜರ 25ನೇ ವರ್ಷದ ಪುಣ್ಯಾರಾಧನೆಯ ಅಂಗವಾಗಿ ಮಂಗಳವಾರ ಜರುಗಿದ ಜಾಗೃತಿ ಜಾಥಾ ಕಾರ್ಯಕ್ರಮದ ಮುಕ್ತಾಯ ಸಮಾರಂಭರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಜೋಳಿಗೆ ಹಿಡಿದು ಹೊರಟಾಗ ಅನೇಕರು ಬಂದು ಮದ್ಯದ ಬಾಟಲಿ, ತಂಬಾಕು, ಗುಟಕಾ ಚೀಟಿ, ಬೀಡಿ ಪಾಕೀಟು ತಂದು ಜೋಳಿಗೆಯಲ್ಲಿ ಹಾಕಿ, ಇನ್ನೂ ಮುಂದೆ ಯಾವುದೇ ದುಶ್ಚಟ ಮಾಡುವುದಿಲ್ಲವೆಂದು ರುದ್ರಾಕ್ಷಿ ಧರಿಸಿ ಪ್ರಮಾಣ ಮಾಡಿದ್ದಾರೆ. ಇದು ಅನೇಕರು ತೆಗೆದುಕೊಂಡ ಮಹತ್ವದ ನಿರ್ಧಾರವಾಗಿದೆ ಎಂದರು.