Breaking News

ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರ ಜೊತೆಗೆ ಹಿರಿಯ ನಾಗರಿಕರೊಬ್ಬರು ವಾಗ್ವಾದ

Spread the love

ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರ ಜೊತೆಗೆ ಹಿರಿಯ ನಾಗರಿಕರೊಬ್ಬರು ವಾಗ್ವಾದ ಮಾಡಿರುವ ಘಟನೆ ನಡೆದಿದೆ. ಅಲ್ಲದೇ ಟ್ರಾಫಿಕ್ ಪೊಲೀಸರ ಕಿರಿಕಿರಿಯಿಂದ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಹೌದು ಬೆಳಗಾವಿಯ ಆರ್‍ಟಿಓ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಹೀಗೆ ಬಿದ್ದಿರುವ ಬೈಕ್‍ನ್ನು ನಿಲ್ಲಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಬೈಕ್ ಓಡಿಸುತ್ತಿದ್ದವರ ನಿಯಂತ್ರಣ ತಪ್ಪಿ ಬೈಕ್ ಕೆಳಗೆ ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಬೈಕ್ ಸವಾರ ಟ್ರಾಫಿಕ್ ಪೊಲೀಸರ ಜೊತೆಗೆ ತೀವ್ರ ವಾಗ್ವಾದ ಮಾಡಿದರು.

ವೀರಭದ್ರನಗರ ಜೈಲ್ ಕಾಲೋನಿಯಿಂದ ಕೆಲಸದ ನಿಮಿತ್ಯ ಕೋರ್ಟಗೆ ಹೋಗುತ್ತಿದ್ದರು. ಟ್ರಾಫಿಕ್ ಪೊಲೀಸರು ಬೈಕ್ ಅಡ್ಡಗಡ್ಡಿ ನಿಲ್ಲಿಸುವ ವೇಳೆ ಈ ಅವಘಡ ಸಂಭವಿಸಿದೆ. ಬೈಕ್‍ನಲ್ಲಿದ್ದ ಔಷಧಿ, ಹೆಲ್ಮೆಟ್, ಕಾಗದಪತ್ರಗಳು ಕೂಡ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ವೇಳೆ ಮಾತನಾಡಿದ ಆ ಬೈಕ್ ಸವಾರ ನನ್ನ ಮಕ್ಕಳು ಗಾಡಿ ಓಡಿಸಿದ್ದಾರೆ, ನಾನು ಇಲ್ಲ ಅಂತಾ ಹೇಳುವುದಿಲ್ಲ. ದಂಡ ತುಂಬುತ್ತೇನೆ ಎಂದು ಹೇಳಿದ್ದೇನೆ. ಆದರೆ ಒಂದು ಸಾರಿ 2 ಸಾವಿರ ಹೇಳುತ್ತಾರೆ, ಮತ್ತೊಮ್ಮೆ 8 ಸಾವಿರ ಹೇಳುತ್ತಾರೆ.

ನಾವು ಯಾವ ಅಮೌಂಟ್ ತುಂಬಬೇಕು. ಒಂದು ಕನ್ಫರ್ಮ ಅಮೌಂಟ್ ಹೇಳಬೇಕು. ಈಗ ಗಾಡಿ ಬಿಟ್ಟು ಹೋಗಿ ಎನ್ನುತ್ತಿದ್ದಾರೆ. ನಾನು ಪೆಸೆಂಟ್ ಇದ್ದೇನೆ. ನನಗೆ ನಡೆದುಕೊಂಡು ಹೋಗಲು ಆಗುವುದಿಲ್ಲ ಎಂದು ಹೇಳಿದರೂ ಬಿಡುತ್ತಿಲ್ಲ. ನನ್ನ ಬಳಿ ಪ್ರತಿಯೊಂದು ದಾಖಲೆಗಳು ಇವೆ. ನಾನು ಕೂಡ ಜೈಲು ಇಲಾಖೆಯ ಸಿಬ್ಬಂದಿ. ಆದರೂ ನನ್ನ ಜೊತೆಗೆ ಈ ರೀತಿ ವರ್ತಿಸಿ ಬೈಕ್ ಕೆಡವಿದರು ಎಂದು ಆರೋಪಿಸಿದರು.


Spread the love

About Laxminews 24x7

Check Also

ಕಾಲುಜಾರಿ ನಾಲೆಗೆ ಬಿದ್ದ ಬಾಲಕಿ, ರಕ್ಷಣೆಗೆ ಹೋದ ನಾಲ್ವರು ಸೇರಿ ಐವರು ಮಕ್ಕಳು ನೀರುಪಾಲು

Spread the loveಮಂಡ್ಯ: ಬಟ್ಟೆ ತೊಳೆಯುವಾಗ ಕಾಲು ಜಾರಿ ಬಿದ್ದ ಬಾಲಕಿಯ ರಕ್ಷಣೆಗೆ ಮುಂದಾಗಿ, ಐವರು ಮಕ್ಕಳು ನೀರುಪಾಲಾದ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ