ಪೊಲೀಸ್ ಆಗಬೇಕಾದರೆ ದೈಹಿಕವಾಗಿ ಫಿಟ್ ಆಗಿರಬೇಕು. ಚಟುವಟಿಕೆಗಳ ಮೂಲಕ ನಮ್ಮ ದೇಹವನ್ನು ಚನ್ನಾಗಿ ಇಟ್ಟುಕೊಳ್ಳಬೇಕು. ದೇಹ ಚನ್ನಾಗಿದ್ದರೆ ಮನಸ್ಸು ಕೂಡ ಒಳ್ಳೆಯ ರೀತಿ ಕೆಲಸ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಡಿಸಿಪಿ ಪಿ.ವಿ.ಸ್ನೇಹಾ ಅವರು ಸಲಹೆ ನೀಡಿದರು.
ಗುರುವಾರ ಬೆಳಗಾವಿಯ ಸರ್ದಾರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಿಸಿಪಿ ಪಿ.ವಿ.ಸ್ನೇಹಾ ಅವರುಶನಿವಾರ ನಿಮಗೆ ಕಾರ್ಯಕ್ರಮ ಶುರುವಾಗಿದೆ. ಈ ವೇಳೆ ಸಂಪನ್ಮೂಲ ವ್ಯಕ್ತಿಗಳು ಬಂದು ನಿಮಗೆ ಪಾಠ ಹೇಳುತ್ತಾರೆ.
ಪಾಠದಲ್ಲಿ ಚಟುವಟಿಕೆಗಳು ಇರುತ್ತೇವೆ. ಇವುಗಳನ್ನು ಚನ್ನಾಗಿ ನೀವು ತಿಳಿದುಕೊಳ್ಳಬೇಕು. ನಿಮಗೆ ಯೂನಿಫಾರ್ಮ ಕೊಡುತ್ತೇವೆ. ಪೊಲೀಸರಿಗೆ ಸರಿಸಮಾನವಾಗಿ ಎಲ್ಲ ತಿಳಿದುಕೊಳ್ಳುತ್ತಿರಿ. ಆದರೆ ಈ ಕಾರ್ಯಕ್ರಮವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಮಾಜ ವಿಜ್ಞಾನ, ವಿಜ್ಞಾನ, ಕನ್ನಡ, ಇಂಗ್ಲೀಷ ಸೇರಿ ಎಲ್ಲಾ ಪಾಠಗಳನ್ನು ಚನ್ನಾಗಿ ತಿಳಿದುಕೊಂಡರೆ ಮಾತ್ರ ಶನಿವಾರದ ಕಾರ್ಯಕ್ರಮ ನಿಮಗೆ ಅರ್ಥವಾಗುತ್ತದೆ.
ಪರೀಕ್ಷೆ ಮತ್ತು ಚಟುವಟಿಕೆಗಳಲ್ಲಿ ಯಾರು ಚನ್ನಾಗಿ ಮಾಡುತ್ತಾರೆ, ಅವರಿಗೆ ಎರಡು ಯೂನಿಫಾರ್ಮ ಕೊಟ್ಟು, ಮುಖ್ಯವಾದ ಸಂದರ್ಭದಲ್ಲಿ ನಮ್ಮ ಜೊತೆಗೆ ಕೆಲಸ ಮಾಡಲು ತೆಗೆದುಕೊಳ್ಳುತ್ತೇವೆ. ನಿಜವಾಗಲೂ ನೀವು ಪೊಲೀಸ್ ಆಗಬೇಕು ಅಂತಾ ಇದ್ದರೆ ಈ ಕಾರ್ಯಕ್ರಮದಲ್ಲಿ ಹೇಳಿಕೊಡುವ ಟ್ರಾಫಿಕ್, ಜೀವ ಉಳಿಸುವ, ಪರೇಡ್, ಕಾಂಬ್ಯಾಕ್ಟ ಫೈಟಿಂಗ್, ಅಟೆನ್ಷನ್ ಸೇರಿ ಇನ್ನಿತರ ಚಟುವಟಿಕೆಗಳಲ್ಲಿ ಒಳ್ಳೇಯ ರೀತಿ ಭಾಗಿಯಾಗಬೇಕು. ಪೊಲೀಸ್ ಆಗಬೇಕಾದರೆ ದೈಹಿಕವಾಗಿ ಫಿಟ್ ಆಗಿರಬೇಕು. ಚಟುವಟಿಕೆಗಳ ಮೂಲಕ ನಮ್ಮ ದೇಹವನ್ನು ಚನ್ನಾಗಿ ಇಟ್ಟುಕೊಳ್ಳಬೇಕು. ದೇಹ ಚನ್ನಾಗಿದ್ದರೆ ಮನಸ್ಸು ಒಳ್ಳೆಯ ರೀತಿ ಕೆಲಸ ಮಾಡುತ್ತದೆ. ಬರೀ ಮೊಬೈಲ್ ಹಿಡಿದುಕೊಂಡು ನಿಂತರೇ ಏನೂ ಆಗುವುದಿಲ್ಲ ಎಂದರು.