ರಮೇಶ ಜಾರಕಿಹೊಳಿ ಅವರು ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲ ಅವರ ಭವಿಷ್ಯ ಇಲ್ಲೇ ಇದೆ ಅವರು ಆದಷ್ಟು ಬೇಗ ಮಂತ್ರಿಯಾಗುತ್ತಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಬಿಟ್ಟರೆ ಜೆಡಿಎಸ್ ನಲ್ಲಿ ಏನು ಇದೆ ಸಚಿವ ಸಂಪುಟ ವಿಸ್ತರಣೆ ಆದರೆ ಮೊದಲು ಹೆಸರು ಜಾರಕಿಹೊಳಿ ಅವರದ್ದು ಇದೆ ಎಂದರು.