Breaking News

ಯಮಕನಮರಡಿ ಮತಕ್ಷೇತ್ರದ ಕಡೋಲಿ‌‌, ಕೇದನೂರ, ಮನ್ನಿಕೇರಿ ಹಾಗೂ ಹಂದಿಗನೂರ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ

Spread the love

ಯಮಕನಮರಡಿ ಮತಕ್ಷೇತ್ರದ ಕಡೋಲಿ‌‌ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೇದನೂರ, ಮನ್ನಿಕೇರಿ ಹಾಗೂ ಹಂದಿಗನೂರ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಯಿತು.

ಮಣ್ಣಿಕೇರಿ ಗ್ರಾಮದಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಮತ್ತು 25 ಲಕ್ಷ ರೂ. ಸಿಸಿ ರಸ್ತೆ,

ಕೇದನೂರ ಗ್ರಾಮದಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ಕೇದನೂರ ದಿಂದ ಹೈವೆ ರಸ್ತೆವರೆಗೆ ಡಾಂಬರೀಕರಣ, ಬ್ರಹ್ಮಲಿಂಗ ಗಲ್ಲಿ 20 ಲಕ್ಷ ರೂ. ಸಿ.ಸಿ. ರಸ್ತೆ, ಪಾಟೀಲ ಗಲ್ಲಿ 15 ಲಕ್ಷ ರೂ. ಸಿ.ಸಿ. ರಸ್ತೆ, ಕೇದನೂರ ರಿಂದ ಮಣ್ಣಿಕೇರಿವರೆಗೆ 50 ಲಕ್ಷ ರೂ. ವೆಚ್ಚದ ಡಾಂಬರೀಕರಣ, ಜೆ ಜೆ ಎಮ್ ಯೋಜನೆಯಡಿ ಕೇದನೂರ ತೀರ್ಥ ಬಾವಿಯಿಂದ ಟ್ಯಾಂಕ್‌ ವರೆಗೆ ಪೈಪ್ ಲೈನ್‌ 40 ಲಕ್ಷ ರೂ. ವೆಚ್ಚದ ಕಾಮಗಾರಿ,

ಕೇದನೂರ ಗ್ರಾಮದ ಕನ್ನಡ ಮತ್ತು ಮರಾಠಿ ಪ್ರಾಥಮಿಕ ಶಾಲೆಗಳಿಗೆ ತಲಾ 5 ಲಕ್ಷ ವೆಚ್ಚದ ಟೈಲ್ಸ್ ಅಳವಡಿಕೆ ಮತ್ತು 3 ಲಕ್ಷ ರೂ. ಬೋರವೆಲ್ ಹಾಗೂ ಹಂದಿಗನೂರ ಗ್ರಾಮದಿಂದ ಇದ್ದಲಹೊಂಡ ಗ್ರಾಮದವರೆಗೆ ಡಾಂಬರೀಕರಣ ಕಾಮಗಾರಿಗಳಿಗೆ ಚುನಾಯಿತ ‌ಪ್ರತಿನಿಧಿಗಳು, ಗ್ರಾಮದ ಮುಖಂಡರು ‌ಮತ್ತು ಹಿರಿಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ