ಕ್ಷುಲ್ಲಕ ಕಾರಣಕ್ಕಾಗಿ ಓರ್ವನ ಮೇಲೆ ಸುಮಾರು ನಾಲ್ವರು ಜನರ ಗುಂಪು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಭಾಗ್ಯನಗರ ಮೊದಲನೇ ಕ್ರಾಸ್‍ನಲ್ಲಿರುವ ದತ್ತ ಮಂದಿರ ಹತ್ತಿರ ಈ ಘಟನೆ ನಡೆದಿದ್ದು. ಅಶೀಶ್ ಶೆಣವೆ ಎಂಬ ವ್ಯಕ್ತಿ ಹಲ್ಲೆಗೆ ಒಳಗಾದವರು. ಹಲ್ಲೆಗೆ ಒಳಗಾದ ಅಶೀಶ್ ಕಸ ಚೆಲ್ಲಲು ಹೋಗಿದ್ದರು ಈ ಸಂದರ್ಭದಲ್ಲಿ ಆಯ ತಪ್ಪಿ ಅಲ್ಲಿ ಹೋಗುವ ದ್ವಿಚಕ್ರ ವಾಹನಕ್ಕೆ ಅವನ ಕೈ ತಾಗಿದೆ.
ಅಷ್ಟಕ್ಕೆ ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿ ತನ್ನ ಸ್ನೇಹಿತರನ್ನು ಕರೆಸಿದ್ದಾನೆ. ಅವರು ಬಂದವರೇ ಮತ್ತೇ ವಾದಕ್ಕಿಳಿದು ಅಶೀಶ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಲ್ಲದೇ ದೊಡ್ಡದಾದ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ.ತೀವ್ರವಾಗಿ ಗಾಯಗೊಂಡಿರುವ ಅಶೀಶ್ ಶೆಣವೆ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ