ಮಾಸಾಶನ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ದಿವ್ಯಾಂಗರು ಪ್ರತಿಭಟನೆ ನಡೆಸಿದರು.
ಹೌದು ಬುಧವಾರ ಬೆಳಗಾವಿಯ ಡಿಸಿ ಕಚೇರಿಗೆ ಆಗಮಿಸಿದ ಅಂಗವಿಕಲರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಿವ್ಯಾಂಗ ಉಮೇಶ ರೊಟ್ಟಿ ಅವರು ದೈಹಿಕವಾಗಿ ಶೇ.75ರಿಂದ ಶೇ.100ರಷ್ಟು ಅಂಗವಿಕಲತೆ ಇರುವ ಜನರಿಗೆ ಪ್ರಸ್ತುತ ಈಗಿರುವ ಮಾಸಾಶನ 1400 ರೂಪಾಯಿ ಯಾವುದಕ್ಕೂ ಸಾಲುತ್ತಿಲ್ಲ.
ಈಗಿನ ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಇದರಿಂದ ನಮಗೆ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ.
ಆದ್ದರಿಂದ ಸರ್ಕಾರ ಈಗಿರುವ ಮಾಸಾಶನವನ್ನು ಕನಿಷ್ಠ 3 ಸಾವಿರ ರೂಪಾಯಿ-5 ಸಾವಿರ ರೂಪಾಯಿ ವರೆಗೆ ಏರಿಸಬೇಕು. ಅದೇ ರೀತಿ ವಿವಾಹಿತ ಅಂಗವಿಕರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಹಾಗೂ ಸರ್ಕಾರದ ಸಹಾಯಧನವನ್ನು ಸರ್ಕಾರ ನೀಡಬೇಕು ಎಂದು ಕೇಳಿಕೊಂಡರು.