Breaking News

ಈಗ ಗೂಗಲ್‌ ಸರದಿ; 10 ಸಾವಿರ ಮಂದಿಯನ್ನು ತೆಗೆದು ಹಾಕಲು ಸಿದ್ದತೆ

Spread the love

ಟರ್‌, ಮೆಟಾ, ಅಮೆಜಾನ್‌ ಬಳಿಕ ಆಲ#ಬೆಟ್‌ನಿಂದಲೂ ಹತ್ತು ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ.

ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ಗೆ ಹೂಡಿಕೆ ಮಾಡಿರುವ ಕ್ರಿಸ್ಟೋಫ‌ರ್‌ ಹಾನ್‌ ಅವರು ಕಂಪನಿಯಲ್ಲಿ ಉತ್ತಮ ರೀತಿಯಲ್ಲಿ ಸಾಧನೆ ತೋರಿಸದೇ ಇರುವವರನ್ನು ತೆಗೆದು ಹಾಕಬೇಕು ಎಂದು ಫ‌ರ್ಮಾನು ಹೊರಡಿಸಿದ್ದಾರೆ.

ಇದರ ಜತೆಗೆ ಕಂಪನಿ ಉದ್ಯೋಗಿಗಳಿಗೆ ಮಿತಿ ಮೀರಿ ಸಂಬಳ ನೀಡುತ್ತಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಮ್ಯಾನೇಜರ್‌ಗಳಿಗೆ ತೃಪ್ತಿದಾಯಕವಾಗಿ ಸಾಧನೆ ಮಾಡದಿರುವ ಉದ್ಯೋಗಿಗಳನ್ನು ವರ್ಗೀಕರಿಸಲು ಸೂಚನೆ ನೀಡಲಾಗಿದೆ. ಅವರು ಸೂಚಿಸುವವರನ್ನು ತೆಗೆದು ಹಾಕಲಾಗುತ್ತದೆ. ಗೂಗಲ್‌ನ ಮಾತೃಸಂಸ್ಥೆ 1,87,000 ಮಂದಿ ಉದ್ಯೋಗಿಗಳನ್ನು ಹೊಂದಿದೆ.

ಗ್ರೀನ್‌ ಕಾರ್ಡ್‌ಗೆ ಆತಂಕ:
ಮತ್ತೂಂದೆಡೆ, ಎಚ್‌-1ಬಿ ವೀಸಾ ಮೂಲಕ ತೆರಳಿದ ಭಾರತೀಯ ಟೆಕಿಗಳಿಗೆ ಆತಂಕ ಉಂಟಾಗಿದೆ. ಮೆಟಾ, ಅಮೆಜಾನ್‌, ಟ್ವಿಟರ್‌ ಸೇರಿದಂತೆ ಹಲವು ಕಂಪನಿಗಳು 45 ಸಾವಿರ ಮಂದಿಯನ್ನು ಅಮೆರಿಕದಲ್ಲಿ ನಿಯೋಜಿಸಿವೆ.

ಮೆಟಾ ಮತ್ತು ಟ್ವಿಟರ್‌- ಈ ಎರಡು ಕಂಪನಿಗಳೇ 350 ಮಂದಿಗೆ ಉದ್ಯೋಗ ನೀಡಿದ್ದವು. ಅವರಿಗೆ ಈಗ ಕೆಲಸ ಕಳೆದುಕೊಂಡ 60 ದಿನಗಳ ಒಳಗಾಗಿ ಹೊಸ ಉದ್ಯೋಗ ಹುಡುಕಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಜತೆಗೆ ಗ್ರೀನ್‌ ಕಾರ್ಡ್‌ಗಾಗಿ ಕಾಯುತ್ತಿದ್ದವರಿಗೂ ಆತಂಕದ ಸ್ಥಿತಿ ಉಂಟಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ