ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ತಜ್ಞರ ಮಾರ್ಗದರ್ಶನದಲ್ಲಿ ಯುದ್ಧೋಪಾದಿಯಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಬುಧವಾರ ಶಾಸಕ ಅನಿಲ್ ಬೆನಕೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಬೆಳಗಾವಿಯಲ್ಲಿನ ಎಲ್ಲಾ ವೃತ್ತಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅದೇ ರೀತಿ ಸಂಭಾಜಿ ವೃತ್ತವನ್ನೂ ಸೌಂದರ್ಯಿಕರಣ ಮಾಡಲಾಗುತ್ತಿದೆ.
ಸಂಭಾಜಿ ಮಹಾರಾಜರು ಈ ಪ್ರದೇಶಕ್ಕೆ ಭೇಟಿ ನೀಡಿದ ಐತಿಹಾಸಿಕ ದಾಖಲೆಗಳಿವೆ. ಛತ್ರಪತಿ ಸಂಭಾಜಿ ಮಹಾರಾಜರ ಸ್ಮಾರಕವನ್ನು ಆಧುನಿಕ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರವೇ ಇದನ್ನು ಲೋಕಾರ್ಪಣೆ ಮಾಡುತ್ತೇವೆ ಎಂದು ಅನಿಲ್ ಬೆನಕೆ ಅವರು ಭರವಸೆ ನೀಡಿದರು.
ಉತ್ತಮ ಗುಣಮಟ್ಟದ ಕುಶಲಕರ್ಮಿಗಳು ಈ ಕೆಲಸವನ್ನು ಮಾಡಲು ಹಗಲೀರುಳು ಶ್ರಮಿಸುತ್ತಿದ್ದಾರೆ. ಈ ಕಾಮಗಾರಿಗೆ ಹಣ ಮಂಜೂರು ಮಾಡಲು ಶಾಸಕ ಅನಿಲ್ ಬೆನಕೆ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ.
ಈ ವೇಳೆ ಸಂಭಾಜಿ ಮಹಾರಾಜರ ಸ್ಮಾರಕ ಸೌಂದರ್ಯೀಕರಣ ಸಮಿತಿ ಅಧ್ಯಕ್ಷ ಸುನೀಲ ಜಾಧವ, ಮರಾಠ ಸಮಾಜದ ಮುಖಂಡ ಗುಣವಂತ ಪಾಟೀಲ, ಲೋಕಮಾನ್ಯ ತಿಲಕ ಗಣೇಶ ಮಂಡಳಿ ಅಧ್ಯಕ್ಷ ವಿಜಯ ಜಾಧವ, ಶಿವಸೇನೆ ಮುಖಂಡ ಬಂಡು ಕೇರವಾಡಕರ, ನಗರಸೇವಕ ಜಯತೀರ್ಥ ಸವದತ್ತಿ, ಪ್ರವೀಣ ಪಾಟೀಲ, ಶಿವಪ್ರಸಾದ ಮೋರೆ, ಆದಿತ್ಯಾ ಪಾಟೀಲ, ಶ್ರೀನಾಥ ಪವಾರ ಸೇರಿ ಇನ್ನಿತರರು ಉಪಸ್ಥಿತರಿದ್ದರು