ಹುಕ್ಕೇರಿ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಮತ್ತು ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಅದ್ದೂರಿ ಮೇರವಣೆಗೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ ಮತ್ತು ಪೃಥ್ವಿ ಕತ್ತಿ ದಿವಂಗತ ಉಮೇಶ ಕತ್ತಿ ಮತ್ತು ಪುನಿತ ರಾಜಕುಮಾರ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಶ್ರೀ ಗಳು ಗಡಿಭಾಗದ ಹುಕ್ಕೇರಿ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ವನ್ನು ಎಲ್ಲಾ ಧರ್ಮಿಯರು ಉತ್ಸಾಹದಿಂದ ತಮ್ಮ ಮನೆಯ ಹಬ್ಬವನ್ನಾಗಿ ಆಚರಿಸುತ್ತಿದ್ದಾರೆ, ರಾಜ್ಯ ಸರ್ಕಾರವು ಸಹ ರಾಜ್ಯೋತ್ಸವ ನಮಿತಿಗೆ ಸ್ಪಂದನೆ ನೀಡಬೇಕು ಎಂದರು.
ಅದೇ ರೀತಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ, ಪುರಸಭೆ ಸದಸ್ಯರಾದ ಮಹಾವೀರ ನಿಲಜಗಿ, ಸದಾನಂದ ಕರೆಪ್ಪಗೋಳ, ರಾಜು ಮುನ್ನೋಳ್ಳಿ ಮಾದ್ಯಮಗಳೊಂದಿಗೆ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಉತ್ಸಾಹಿ ಸಮಿತಿ ಸದಸ್ಯರು, ಪುರಸಭೆ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕನ್ನಡಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಮ್ಮ ನಾಡು ನುಡಿ ಸಂಸ್ಕೃತಿ ಬಿಂಬಿಸುವ ರೂಪಕಗಳು, ವಾದ್ಯಗಳು ಮೇರವಣೆಗೆಯ ಆಕರ್ಷಣೆಯ ವಾಗಿದ್ದವು.
ಮಧ್ಯಾಹ್ನ ಕೋರ್ಟ ಸರ್ಕಲ್ ಸೇರಿದ ಮೇರವಣೆಗೆವು ಸಭೆಯಾಗಿ ಮಾರ್ಪಟ್ಟಿತು.