Breaking News

ಆಸ್ತಿ ಮಾರಾಟಗಾರರು, ಖರೀದಿದಾರರಿಗೆ ಗುಡ್ ನ್ಯೂಸ್: 7 ದಿನದಲ್ಲೇ ಖಾತೆ ಬದಲಾವಣೆ ಕಡ್ಡಾಯ

Spread the love

ಬೆಂಗಳೂರು: ಸ್ಥಿರಾಸ್ತಿ ಮಾರಾಟ ಕ್ರಯ ಪತ್ರ ನೋಂದಣಿಯಾದ 7 ದಿನಗಳೊಳಗೆ ಖರೀದಿದಾರರ ಹೆಸರಿಗೆ ಖಾತೆ ಮತ್ತು ಪಹಣಿ ಬದಲಾವಣೆ ಕಡ್ಡಾಯಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ 34 ದಿನಗಳ ಒಳಗೆ ಖಾತೆ ಬದಲಾವಣೆ ಮಾಡಬೇಕೆಂಬ ನಿಯಮವಿದ್ದು, ಆಸ್ತಿ ಕರೀತಿದಾರರಿಗೆ ಸಮಸ್ಯೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಿಂದ ತ್ವರಿತವಾಗಿ ಸಾಲ ಪಡೆಯಲು ಆಗುತ್ತಿಲ್ಲ. ಇದನ್ನು ಪರಿಗಣಿಸಿ ಸ್ಥಿರಾಸ್ತಿ ಮಾರಾಟ ಕ್ರಯ ಪತ್ರಗಳು ನೋಂದಣಿಯಾದ 7 ದಿನಗಳ ಒಳಗೆ ಖಾತೆ ಬದಲಾವಣೆ ಮತ್ತು ಪಹಣಿ ಬದಲಾವಣೆ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಬಂಡೀಪುರ ಸಫಾರಿ ಪುನಾರಂಭಕ್ಕೆ ರೈತ ಸಂಘದ ವಿರೋಧ: ಗುಂಡ್ಲುಪೇಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Spread the love​ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಪುನಾರಂಭಿಸಲು ಉದ್ದೇಶಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ