Breaking News

ಎಚ್‌ಡಿಕೆ ಕೇಂದ್ರಕ್ಕೆ ಹೋದರೆ ನಾನೇ ಸಿಎಂ ಅಭ್ಯರ್ಥಿ: ಇಬ್ರಾಹಿಂ

Spread the love

ಹುಬ್ಬಳ್ಳಿ: ನನಗೂ ಸಿಎಂ ಆಗಬೇಕು ಎನ್ನುವ ಆಸೆಯಿದೆ. ಆದರೆ, ಮುಂದಿನ ಸಿಎಂ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಎಂದು ನಿರ್ಧಾರವಾಗಿದೆ. ಒಂದು ವೇಳೆ ಎಚ್‌ಡಿಕೆ ಕೇಂದ್ರಕ್ಕೆ ಹೋದರೆ ನಾನೇ ಸಿಎಂ ಅಭ್ಯರ್ಥಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಕೇಶವ ಕೃಪಾ ಹಾಗೂ ಬಸವ ಕೃಪಾ ನಡುವೆ ಸಿಕ್ಕು ಒದ್ದಾಡುತ್ತಿದ್ದಾರೆ. ಅವರು ಕೂಡ ನಮ್ಮ ಪಕ್ಷದಿಂದ ಹೋದವರು. ಮರಳಿ ಬಂದರೆ ಸ್ವಾಗತಿಸುತ್ತೇವೆ. ತಂದೆ ಮುತ್ಸದ್ಧಿತನ ಮಗ ಬಸವರಾಜ ಬೊಮ್ಮಾಯಿ ಅವರಲ್ಲಿ ಕಾಣುತ್ತಿಲ್ಲ. ಅಧಿಕಾರಕ್ಕಾಗಿ ಸಿದ್ಧಾಂತ ಬದಲಾಯಿಸಿಕೊಂಡಿದ್ದಾರೆ. ಬಸವರಾಜ ಹೊರಟ್ಟಿ ಹಾಗೂ ಎನ್‌.ಎಚ್‌.ಕೋನರಡ್ಡಿ ಟಿಕೆಟ್‌ ಕೊಡುವ ಸ್ಥಾನದಲ್ಲಿದ್ದರು. ಇಂದು ಬೇಡುವ ಹಂತಕ್ಕೆ ಇಳಿದಿದ್ದಾರೆ. ದುರವಸ್ಥೆಗೆ ಬೇಸತ್ತು ಹೊರಟ್ಟಿ ಮನಸ್ಸು ಬದಲಾಯಿಸಬಹುದು. ಮತದಾರರ ಮಾಹಿತಿ ಕಳ್ಳತನ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷದಿಂದ ಆಗಿದೆ. ಚುನಾವಣಾ ಆಯೋಗ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.


Spread the love

About Laxminews 24x7

Check Also

ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಅರವಿಂದ ಬೆಲ್ಲದ.

Spread the love ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ