ಬೆಳಗಾವಿ ತಾಲೂಕಿನಲ್ಲಿ ಸ್ಮಾರ್ಟ್ ಕ್ಯಾಷು ಫ್ಯಾಕ್ಟರಿಯನ್ನು ಮಾಜಿ ಸಚಿವರು, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಹೌದು ಬೆಳಗಾವಿ ತಾಲೂಕಿನ ಸುಪುತ್ರ, ಸಮಾಜ ಸೇವಕ, ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ್ ಮನ್ನೋಳ್ಕರ್ ಅವರು ಈ ಭಾಗದ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕಾಜು ಫ್ಯಾಕ್ಟರಿಯನ್ನು ಸ್ಥಾಪಿಸಿದ್ದಾರೆ. ದೇಶದ ಪ್ರಸಿದ್ಧ ಎಮೋಸಿಸ್ ಗ್ರೂಪ್‍ನೊಂದಿಗೆ ಸ್ಮಾರ್ಟ್ ಕ್ಯಾಷು ಫ್ಯಾಕ್ಟರಿಯನ್ನು ಬೆಳಗುಂದಿ ಸಮೀಪ ಸೋನೋಲಿ ಎಳೆಬೈಲ ಗ್ರಾಮದಲ್ಲಿ ಪ್ರಾರಂಭ ಮಾಡಿದ್ದಾರೆ. ಶನಿವಾರ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಸಂಸದ ಮಂಗಳಾ ಅಂಗಡಿ ಅವರು ಜಂಟಿಯಾಗಿ ಇದನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶ್ರೀಕೃಷ್ಣ ಉಪಾಧ್ಯಾಯ ಈ ಭಾಗದ ಅತಿ ದೊಡ್ಡ ಹಾಗೂ ಲೇಟೆಸ್ಟ್ ಮಷೀನ್‍ನಿಂದ ಈ ಫ್ಯಾಕ್ಟರಿಯಲ್ಲಿ ಪ್ರತಿದಿನ ಐದು ಟನ್ ಕಾಜು ತಯಾರ ಮಾಡಬಹುದು. ಎಲ್ಲಾ ರೈತರು ಈ ಫ್ಯಾಕ್ಟರಿಯ ಸೌಲಭ್ಯ ಪಡೆದುಕೊಳ್ಳಿ ಎಂದರು.
ನಂತರ ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ ನಾಗೇಶ್ ಮನ್ನೋಳ್ಕರ್ ಒಬ್ಬ ಒಳ್ಳೆಯ ಉದ್ಯಮಿ ಸಮಾಜ ಸೇವಕರಾಗಿದ್ದು. ಇದೀಗ ಈ ಹೊಸ ಫ್ಯಾಕ್ಟರಿಯನ್ನು ಪ್ರಾರಂಭ ಮಾಡಿದ್ದಾರೆ. ಈ ಭಾಗದ ಜನರಿಗೆ ಮತ್ತು ಇವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಇವತ್ತು ಮಧುರಾದಿಂದ ಕೃಷ್ಣ ಶರ್ಮ ಹಾಗೂ ಕೃಷ್ಣ ಉಪಾಧ್ಯಾಯರು ಈ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಇವರಿಗೆ ಶುಭವಾಗಲಿ ಎಂದರು.