ಬೈಕ್‌ಗೆ ಹಿಂಬದಿಯಿಂದ ಕ್ಯಾಂಟರ್ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಝಳಕಿ ಕ್ರಾಸ್ ಬಳಿ ನಡೆದಿದೆ.
ಗುರುರಾಜ್ ಶಿರಶ್ಯಾಡ ಮೃತಪಟ್ಟಿರುವ ಬೈಕ್ ಸವಾರನಾಗಿದ್ದು ಬೈಕ್‌ನಲ್ಲಿ ಹೋಗುವಾಗ ಬೈಕ್‌ಗೆ ಹಿಂಬದಿಯಿಂದ ಕ್ಯಾಂಟರ್ ವಾಹನ ಡಿಕ್ಕಿಯಾಗಿದೆ. ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇನ್ನೂ ಡಿಕ್ಕಿ ವಿಡಿಯೋ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.ಈ ಕುರಿತು ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..