Breaking News

ಸ್ಥಳೀಯ ಸಂಸ್ಥೆಗಳ ಆಸ್ತಿ ದಾಖಲೆಗೆ ಹೈಟೆಕ್ ಸ್ಪರ್ಶ: ಡಿಜಿಟಲೀಕರಣಕ್ಕೆ ‘ಇ-ಆಸ್ತಿ ತಂತ್ರಾಂಶ’ ಜಾರಿ; ಆನ್​ಲೈನ್​ನಲ್ಲೇ ಸಕಲ ಮಾಹಿತಿ

Spread the love

ಬೆಳಗಾವಿ :ಗರ -ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸರ್ಕಾರಿ, ಖಾಸಗಿ ಒಡೆತನದ ಲಕ್ಷಾಂತರ ಆಸ್ತಿ ದಾಖಲೆಗಳಿಗೆ ಇನ್ಮುಂದೆ ಹೈಟೆಕ್ ಸ್ಪರ್ಶ ಸಿಗಲಿದೆ. ಏಕಕಾಲದಲ್ಲಿ ಆನ್​ಲೈನ್​ನಲ್ಲಿಯೇ ಆಸ್ತಿ ದಾಖಲೆಗಳ ಮಾಹಿತಿ ಲಭ್ಯವಾಗಲಿದೆ.

ಹೌದು. ರಾಜ್ಯದಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 1.20 ಕೋಟಿ ಆಸ್ತಿಗಳಿವೆ. ಆದರೆ, ಲಕ್ಷಾಂತರ ಆಸ್ತಿಗಳ ದಾಖಲೆಗಳ ನಿರ್ವಹಣೆ, ಸಂರಕ್ಷಣೆ ಇಲ್ಲದೆ ಸಂಪೂರ್ಣ ಹಾಳಾಗಿವೆ. ಇದರಿಂದಾಗಿ ಸಾರ್ವಜನಿಕರಿಗೆ ಆಸ್ತಿಯ ಮೂಲ ದಾಖಲೆಗಳು ಲಭ್ಯವಾಗುತ್ತಿಲ್ಲ. ಜತೆಗೆ ಸ್ಥಳೀಯ ಸಂಸ್ಥೆಗಳಿಗೆ ಸಮರ್ಪಕವಾಗಿ ತೆರಿಗೆ ವಸೂಲಿ ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲು ‘ಇಆಸ್ತಿ ತಂತ್ರಾಂಶ’ ಜಾರಿಗೊಳಿಸಿದೆ.

ಪ್ರಸ್ತುತ ನಗರ- ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2009-10ನೇ ಸಾಲಿನಿಂದ ಆಸ್ತಿ ಖಾತೆಗಳ ನೋಂದಣಿ, ವರ್ಗಾವಣೆ, ವಿಭಜನೆ, ಮಾರಾಟ, ಒಂದುಗೂಡಿಸುವಿಕೆಯನ್ನು ಸಕಾಲ ಅಡಿ ಅರ್ಜಿ ಸ್ವೀಕರಿಸಿ ನಿರ್ವಹಿಸಲಾಗುತ್ತಿದೆ. ಖಾತಾ ದೃಢೀಕರಣಪತ್ರಗಳನ್ನು ಸಹಾಯಕ ಕಂದಾಯ ಅಧಿಕಾರಿ (ಎಆರ್​ಒ) ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಪಡೆಯಲಾಗುತ್ತಿದೆ. ಕೈಬರಹ ಹೊಂದಿರುವ ಆಸ್ತಿ ಉತಾರಗಳನ್ನು ನೀಡಲಾಗುತ್ತಿದೆ. ಈ ಎಲ್ಲ ದಾಖಲೆಗಳನ್ನು ಪಡೆದುಕೊಳ್ಳಲು ಕನಿಷ್ಠ 20 ರಿಂದ 30 ದಿನ ಕಾಯಬೇಕು. ಇ-ಆಸ್ತಿ ತಂತ್ರಾಂಶ ಅಳವಡಿಕೆಯಿಂದ ಕೈಬರಹದ ಸಹಿ ಇರುವ ಹಕ್ಕು ವರ್ಗಾವಣೆ ಪತ್ರ, ಇತರ ದಾಖಲೆಗಳ ನೀಡುವಿಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಇ-ಆಸ್ತಿ ತಂತ್ರಾಂಶ ಅನುಷ್ಠಾನದಿಂದ ಸ್ಥಳೀಯ ಸಂಸ್ಥೆಗಳಲ್ಲಿನ ಹಳೆಯ ದಾಖಲೆಗಳ ಫೋರ್ಜರಿ ಮಾಡುವುದು, ಒಂದೇ ಆಸ್ತಿಯನ್ನು ಒಬ್ಬರಿಗಿಂತ ಹೆಚ್ಚು ಮಂದಿಗೆ ಮಾರಾಟ, ವರ್ಗಾವಣೆ ಮಾಡುವುದು, ಆಸ್ತಿ ವಿವರಗಳನ್ನು ಅಕ್ರಮವಾಗಿ ತಿದ್ದುವುದು ಸೇರಿ ಇತರ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಅಲ್ಲದೆ, ಸುಮಾರು 1980 ರಿಂದ 2020ರ ಅವಧಿಯಲ್ಲಿ ಎಲ್ಲ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಲು ಸಮಯ ತೆಗೆದುಕೊಳ್ಳುತ್ತಿವೆ. ಕೆಲ ಆಸ್ತಿಗಳ ದಾಖಲೆ ಇಲ್ಲ. ಅಂತಹ ಆಸ್ತಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಸಂಸ್ಥೆಗಳ ಇಂಜಿನಿಯರ್​ಗಳು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಇಆಸ್ತಿ ತಂತ್ರಾಂಶ?: ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಿಸಿ ಅವುಗಳನ್ನು ಆನ್​ಲೈನ್ ವೇದಿಕೆಯಲ್ಲಿ ಅಳವಡಿಸುವ ಸಲುವಾಗಿ ನ್ಯಾಷನಲ್ ಇನ್ಪರ್ವ್ಯಾಟಿಕ್ಸ್ ಸೆಂಟರ್​ನ (ಎನ್​ಐಸಿ) ಸಹಕಾರದಲ್ಲಿ ಇ-ಆಸ್ತಿ ತಂತ್ರಾಂಶ ರೂಪಿಸಿದೆ. ಇದು ಆಸ್ತಿ ದಾಖಲೆ ನಿರ್ವಹಣೆಯ ಹೆಚ್ಚಿನ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಿ, ಮಾನವನ ಹಸ್ತಕ್ಷೇಪ ಕಡಿಮೆ ಮಾಡಲಿದೆ. ಪ್ರತಿಯೊಂದು ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಡಿಜಿ-ಲಾಕರ್​ನಲ್ಲಿ ಸುರಕ್ಷಿತವಾಗಿರಲಿದೆ. ಆಸ್ತಿ ದಾಖಲೆ ತಿರುಚಲು ಅವಕಾಶವೇ ಇಲ್ಲ. ಆಸ್ತಿಯ ಮಾಹಿತಿಗಳನ್ನು ಜನರು ಇ ಆಸ್ತಿ ವೆಬ್​ಸೈಟ್​ನಲ್ಲೇ ನೋಡಬಹುದು. ವ್ಯಾಪಾರ-ವಹಿವಾಟು ಹೆಚ್ಚಳಕ್ಕೂ ಇದು ಸಹಕಾರಿಯಾಗಲಿದೆ. ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಇಲ್ಲಿ ಸೇರಿಸಬಹುದು. ಅಗತ್ಯ ಬಿದ್ದಾಗ ಡಿಜಿಟಲ್ ಸಹಿ ಇರುವ ದಾಖಲೆಯನ್ನು ಸಂಬಂಧಪಟ್ಟ ಅಧಿಕಾರಿಯಿಂದ ಪಡೆದುಕೊಳ್ಳಬಹುದು. ಅದಕ್ಕೆ ತಗಲುವ ಶುಲ್ಕವನ್ನೂ ಆನ್​ಲೈನ್​ನಲ್ಲೇ ಪಾವತಿಸಬಹುದು. ಇದರಿಂದಾಗಿ ಕಚೇರಿಗೆ ಅಲೆಯುವ ಪರಿಸ್ಥಿತಿ ಬರುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

ಬಿಜೆಪಿಗೆ ಈಶ್ವರಪ್ಪ ಕರೆತರಲು ಯತ್ನಿಸಿಲ್ಲ: ರಮೇಶ ಜಾರಕಿಹೊಳಿ

Spread the love ಬೆಳಗಾವಿ: ‘ನಾನು ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಕೆ.ಎಸ್.ಈಶ್ವರಪ್ಪ ಅವರನ್ನು ಮತ್ತೆ ಬಿಜೆಪಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ