Breaking News

ಎಸ್ಟಿ ಸಮಾಜಕ್ಕೆ ಘೋರ ಅನ್ಯಾಯ; ನಿಜವಾದ ಸಮಾಜಗಳಿಗೆ ನಷ್ಟ: ಶ್ರೀ

Spread the love

ಡಹಳ್ಳಿ: ರಾಜ್ಯ ಸರ್ಕಾರ ಮತ ಬ್ಯಾಂಕ್‌ಗಾಗಿ ಇನ್ನೂ ಅನೇಕ ಸಮಾಜಗಳಿಗೆ ಎಸ್ಟಿ ಮೀಸಲಾತಿ ಪ್ರಮಾಣ ಪತ್ರ ನೀಡುತ್ತಿರುವುದು ನಿಜವಾದ ಎಸ್ಟಿ ಸಮಾಜಕ್ಕೆ ಮಾಡುವ ಘೋರ ಅನ್ಯಾಯ ಎಂದು ರಾಜನಹಳ್ಳಿ ವಾಲ್ಮೀಕಿ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

 

ಸಮೀಪದ ರಡ್ಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರ ರಾಜನಹಳ್ಳಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಅಥಣಿ ತಾಲೂಕಾ ಮಟ್ಟದ ವಾಲ್ಮೀಕಿ ಸಮುದಾಯ ಜನಜಾಗೃತಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ ತಳವಾರ, ಪರಿವಾರ ಮತ್ತು ವಾಲ್ಮೀಕಿ ಸಮಾಜ ಮಾತ್ರ ಎಸ್ಟಿ ಮೀಸಲಾತಿ ಪಡೆಯಲು ಅರ್ಹರಿದ್ದಾರೆ.

ಆದರೆ ಇತ್ತೀಚೆಗೆ ಕಲಬುರ್ಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಥಣಿ ತಾಲೂಕಿನ ಹಲ್ಯಾಳದ ಕೃಷ್ಣಾ ರೈತಸಭಾ ಭವನದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಎಸ್ಟಿಗೆ ಯೋಗ್ಯರಲ್ಲದ ಸಮಾಜಗಳಾದ ಕೋಳಿ, ಕಬ್ಬಲಿಗ, ಗಂಗಾಮತ ಹಾಗೂ ಅಂಬಿಗರಿಗೂ ಕೂಡ ತಳವಾರ ಮತ್ತು ಪರಿವಾರ ಸಮಾಜಕ್ಕೆ ಸೇರಿದವರೆಂದು ಪ್ರಮಾಣ ಪತ್ರ ನೀಡುತ್ತಿರುವುದು ನೈಜ ಎಸ್ಟಿಗಳಿಗೆ ತುಂಬಲಾರದ ನಷ್ಟವಾಗುತ್ತಿದೆ.

ಈ ತಾರತಮ್ಯ ಸರಿಪಡಿಸಬೇಕೆಂದು ಆಗ್ರಹಿಸಿ ಇದೇ ನ. 27 ರಂದು ರಾಜನಹಳ್ಳಿ ವಾಲ್ಮೀಕಿ ಸಭಾ ಭವನದಲ್ಲಿ ಎಸ್ಟಿಗೆ ಸೇರಿದ 15 ಶಾಸಕರು, ಇಬ್ಬರು ಸಂಸದರನ್ನು ಸೇರಿ ಸಭೆ ನಡೆಸುವದಲ್ಲದೇ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು, ಎಸ್ಟಿ ಸಮಾಜದವರು ಸಂಘಟಿತರಾಗಬೇಕು, ರಾಜಕಾರಣಿಗಳ ಬಣ್ಣದ ಮಾತಿಗೆ ಯಾರೂ ಮರುಳಾಗದೇ ಜಾಗ್ರತರಾಗಬೇಕು. ವಾಲ್ಮೀಕಿ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶೋಭೆ ತರಬೇಕು ಎಂದು ತಿಳಿಸಿದರು.

ವಾಲ್ಮೀಕಿ ಸಮುದಾಯ ಮುಖಂಡ ರಮೇಶ ಸಿಂದಗಿ ಮಾತನಾಡಿದರು, ವಾಲ್ಮೀಕಿ ಸಮುದಾಯದ ಮುಖಂಡರಾದ ಬಾಬು ಹುಲ್ಯಾಳ, ನಾಗಪ್ಪ ದಳವಾಯಿ, ಮುದಕಪ್ಪ ಗಸ್ತಿ, ಜಿಪಂ ಮಾಜಿ ಸದಸ್ಯ ಶ್ರೀಶೈಲ ಗಸ್ತಿ, ಲಕ್ಕಪ್ಪ ನಾಯಿಕ, ಹಣಮಂತ ಚಿಗರಿ, ಬಸಪ್ಪ ಜನವಾಡ, ಬಸಪ್ಪ ಹುಲ್ಯಾಳ, ಅಪ್ಪಾಜಿ ನಡುವಿನಮನಿ, ಧರ್ಮಪ್ಪ ಗಲಗಲಿ, ಶ್ರೀಧರ ಭುಜಣ್ಣವರ, ಶಿವಾನಂದ ನಾಯಿಕ, ಶೈಲಜಿರಾವ್‌ ನಾಯಕ ಸೇರಿದಂತೆ ಹಲವರು ಇದ್ದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ