ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಟೀಕಿಸುವ ಭರದಲ್ಲಿ ಕರಾವಳಿಯ ಆರಾಧನಾ ಕಲೆ ಯಕ್ಷಗಾನಕ್ಕೆ ಅವಮಾನ ಮಾಡಿದ್ದಾರೆ. ಈ ಕೂಡಲೇ ಕ್ಷಮೆ ಕೇಳಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.
ಸದಾ ಹಿಂದೂಗಳನ್ನು ಅವಮಾನಿಸುತ್ತಲೇ ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಹೆಮ್ಮೆಯ ಕೆಲೆಯಾದ ಯಕ್ಷಗಾನಕ್ಕೆ ಅವಮಾನ ಮಾಡಿದ್ದಾರೆ. ಯಕ್ಷಗಾನ ನಮ್ಮ ರಾಜ್ಯದ ಅಧಿಕೃತ ಕಲೆ. ಕಲೆಯ ಬಗ್ಗೆ ನೀವು ಹೀನಾಯವಾಗಿ ಮಾತನಾಡಿದ್ದೀರಿ. ಇದೀಗ ನೀವು ಸಮಸ್ತ ಯಕ್ಷಗಾನ ಸಂಕುಲಕ್ಕೆ ಕ್ಷಮೆ ಕೇಳುವ ಮೂಲಕ ಗೌರವ ಉಳಿಸಿಕೊಳ್ಳಿ ಎಂದು ರಾಜ್ಯ ಬಿಜೆಪಿ ಹೇಳಿದೆ.
ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್. ಯಕ್ಷಗಾನದಲ್ಲಿ ವೇಷ ಮಾಡುವವನಂತೆ ಇದ್ದಾನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಏಕವಚನದಲ್ಲಿ ಸಿದ್ದರಾಮಯ್ಯ ಟೀಕಿಸಿದ್ದರು. ಇದೀಗ ನಳಿನ್ ಕುಮಾರ್ ಅವರನ್ನು ಟೀಕಿಸುವ ಭರದಲ್ಲಿ ಯಕ್ಷಗಾನವನ್ನು ಉಲ್ಲೇಖಿಸಿದ್ದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
Laxmi News 24×7