Breaking News

ರೋಗ ತಡೆಗೆ ನೀಡಿದ್ದ ಮಾತ್ರೆ ತಿಂದ ಮಕ್ಕಳು ಅಸ್ವಸ್ಥ!; 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲ

Spread the love

ಯಾದಗಿರಿ: ಕಲುಷಿತ ನೀರು ಕುಡಿದು, ಬಿಸಿಯೂಟ ತಿಂದು ಶಾಲಾ ಮಕ್ಕಳು ಅಸ್ವಸ್ಥಗೊಂಡ ಪ್ರಕರಣಗಳು ನಡೆದಿವೆ. ಇದೀಗ ಇಲ್ಲೊಂದು ಕಡೆ ರೋಗ ತಡೆಗೆ ನೀಡಿದ್ದ ಮಾತ್ರೆಗಳನ್ನು ತಿಂದ ಮಕ್ಕಳು ಅಸ್ವಸ್ಥಗೊಂಡಂಥ ಪ್ರಕರಣವೂ ವರದಿಯಾಗಿದೆ. ಈ ಘಟನೆಯಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

 

ಯಾದಗಿರಿ ತಾಲೂಕಿನ ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಆನೆಕಾಲು ರೋಗ ತಡೆಗೆ ಮಾತ್ರೆಗಳನ್ನು ಸೇವಿಸಿ ಈ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಆನೆಕಾಲು ರೋಗ ಮುಕ್ತ ಮಾಡಲು ಇಂದು ಇವರಿಗೆಲ್ಲ ಮಾತ್ರೆಗಳನ್ನು ನುಂಗಿಸಲಾಗಿತ್ತು.

ಆದರೆ ಈ ಮಾತ್ರೆಗಳನ್ನು ನುಂಗಿದ ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಲ್ಲಿ 20ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ