Breaking News

ಮಕ್ಕಳ ದಿನಾಚರಣೆ ನಿಮಿತ್ಯವಾಗಿ 50 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕೊನೆಗಳು ನಿರ್ಮಿಸಲು ಅಡಿಗಲು ಪೂಜೆ: ಶ್ರೀಮಂತ ಪಾಟೀಲ

Spread the love

ದೇಶದ ಮೊದಲನೆಯ ಪ್ರಧಾನೀ ಪಂಡಿತ್ ಜವಾಹರ್ಲಾಲ್ ನೆಹರು ಇವರು ಜನ್ಮ ಜಯಂತಿ ನಿಮಿತ್ಯವಾಗಿ ಕಾಗವಾಡದ ಉರ್ದು ಶಾಲೆ ಹಾಗೂ ಶಡಬಾಳ ಸ್ಟೇಷನ್ ಗ್ರಾಮದ ಕನ್ನಡ ಹಾಗೂ ಮರಾಠಿ ಶಾಲೆಯ ವಿದ್ಯಾರ್ಥಿಗಳಿಗಾಗಿ 50 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕೊನೆಗಳು ಕಟ್ಟಿಸುವ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲರು ಅಡಿಗಲು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಸೋಮವಾರರಂದು ಕಾಗವಾಡದ ಉರ್ದು ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಶಾಸಕರಿಂದ ಹೂಗಳು ನೀಡಿ ಮಕ್ಕಳಿಗೆ ಸನ್ಮಾನಿಸಲಾಯಿತು. ಶ್ರೀಮಂತ ಪಾಟೀಲ್ ಫೌಂಡೇಶನ್ ವತಿಯಿಂದ ಬಾಳೆಹಣ್ಣು ಹಾಗೂ ಸಿಹಿ ನೀಡಿ ಮಕ್ಕಳೊಂದಿಗೆ ಶಾಸಕರು ಬೆರೆತರು.

ಶಾಸಕ ಶ್ರೀಮಂತ ಪಾಟೀಲರು ಮಾತನಾಡಿ ನಾನು ಶಾಸಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕ್ಷೇತ್ರದಲ್ಲಿ ಒಳ್ಳೆ ಗುಣಮಟ್ಟ ದ ಶಿಕ್ಷಣ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲು ಒತ್ತು ನೀಡಿದ್ದೇನೆ ಶುದ್ಧ ಕುಡಿಯುವ ನೀರಿನ ಘಟಕಗಳು ಶಾಲಾ ಕೊನೆಗಳು ನಿರ್ಮಿಸಿದ್ದೇನೆ. ಎಲ್ಲ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಗುರುಮಟ್ಟದ ಶಿಕ್ಷಣ ನೀಡಿರಿ ಎಂದು ಕರೆ ನೀಡಿದರು.


Spread the love

About Laxminews 24x7

Check Also

5 ತಾಲೂಕುಗಳ ಶಾಲೆಗೆ ಇಂದು ರಜೆ ಘೋಷಣೆ

Spread the loveಮಂಗಳೂರು/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್​ 29(ಶುಕ್ರವಾರ) ರಂದು ಜಿಲ್ಲೆಯ ಶಾಲೆ, ಪ್ರೌಢಶಾಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ