Breaking News

ಕಾಂಗ್ರೆಸ್ ಟಿಕೆಟ್ ಗೆ ಅರ್ಜಿಗಳ ಮಹಾಪೂರ ಸುಮಾರು 300 ಕ್ಕೂ ಹೆಚ್ಚು ಜನರು ಇದುವರೆಗೆ ಅರ್ಜಿ

Spread the love

ಬೆಂಗಳೂರು : ಕಾಂಗ್ರೆಸ್ ಟಿಕೆಟ್ ಅರ್ಜಿ ಸಲ್ಲಿಕೆಗೆ ಇನ್ನು ಒಂದೇ ದಿನ ಬಾಕಿ ಇದ್ದು ಇಂದು ಆಕಾಂಕ್ಷಿಗಳು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಮುಗಿಬಿದ್ದರು.

ಸುಮಾರು 300 ಕ್ಕೂ ಹೆಚ್ಚು ಜನರು ಇದುವರೆಗೆ ಅರ್ಜಿ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಕೆಲವರು ಜನ-ಧನ ಬಲದ ಶಕ್ತಿ ಪ್ರದರ್ಶನ ನಡೆಸಿದರು.
ನೂರಾರು ಬೆಂಬಲಿಗರ ಜೊತೆಗೆ ಬಂದು ಆಕಾಂಕ್ಷಿಗಳು ಟಿಕೆಟ್ ಗೆ ಅರ್ಜಿ ಸಲ್ಲಿಸಿದರು. ಕೆಲವರು ಈ ಸಂದರ್ಭದಲ್ಲಿ ಮುಹೂರ್ತಕ್ಕೂ ಆದ್ಯತೆ ನೀಡಿದ್ದರು. ಮಂಡ್ಯ,ಶಿವಮೊಗ್ಗ, ರಾಯಚೂರು, ಕಲಬುರ್ಗಿ ಭಾಗದ ಆಕಾಂಕ್ಷಿಗಳಿಂದ ಇಂದು ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಿದೆ.ನಾಳೆ(ಮಂಗಳವಾರ) ಕೊನೆಯ ದಿನವಾದ ಕಾರಣ ಕೆಪಿಸಿಸಿ ಕಚೇರಿಗೆ ಇಂದೇ ಆಕಾಂಕ್ಷಿಗಳು ಮುಗಿಬಿದ್ದರು.

ರಾಮನಗರ ಕ್ಷೇತ್ರಕ್ಕೆ ಇಕ್ಬಾಲ್ ಹುಸೇನ್ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ, ಬೊಮ್ಮನಹಳ್ಳಿ ಕ್ಷೇತ್ರಕ್ಕೆ ನಿರ್ಮಾಪಕ ಡಿ.ಉಮಾಪತಿ,ಮಹಾದೇವಪುರ, ಸಕಲೇಶಪುರ‌ ಕ್ಷೇತ್ರಗಳಿಗೆ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್, ಸಿಂಧನೂರು ಕ್ಷೇತ್ರಕ್ಕೆ ಅರ್ಜಿ ಮಾಜಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಅರ್ಜಿ ಸಲ್ಲಿಸಿದರು.

ಆದರೆ ಈ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ನಲ್ಲೇ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಈ ಪ್ರಹಸನದ ಅಗತ್ಯವಿರಲಿಲ್ಲ ಎಂಬ ಮಾತೂ ಕೇಳಿ ಬಂದಿದೆ.


Spread the love

About Laxminews 24x7

Check Also

ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಅದಲು ಬದಲಾದ ಆರೋಪ

Spread the loveರಾಯಚೂರು : ಜಿಲ್ಲೆಯ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರದಂದು ಇಬ್ಬರು ಮಹಿಳೆಯರಿಗೆ ಹೆರಿಗೆಯಾಗಿದ್ದು, ಇವೆರಡು ಮಕ್ಕಳನ್ನು ಸಿಬ್ಬಂದಿ ಅದಲು-ಬದಲು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ