Breaking News

ವಾಹನ ಕೆಟ್ಟು ನಿಂತು ಚಾರ್ಮಾಡಿ ಘಾಟ್ ನಲ್ಲಿ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

Spread the love

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಭಾನುವಾರದಂದು ವಾರಾಂತ್ಯ ದಿನವಾದ್ದರಿಂದ ಚಾರ್ಮಾಡಿ ಘಾಟಿಯ ಹನ್ನೊಂದನೇ ತಿರುವಿನಲ್ಲಿ ಪೊಲೀಸ್ ಡಿಆರ್ ವಾಹನ ಕೆಟ್ಟು ನಿಂತು ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು.

ಚಿಕ್ಕಮಗಳೂರಿನ ಪೊಲೀಸ್ ಡಿಆರ್ ವಾಹನ ರಸ್ತೆಗೆ ಕೆಟ್ಟು ನಿಂತಿದ್ದರಿಂದ ಪ್ರವಾಸಿಗರು ಪರದಾಡುವಂತಾಯಿತು.ಎರಡು ಬದಿಯಿಂದ ವಾಹನಗಳು ಏಕಕಾಲದಲ್ಲಿ ಸಂಚರಿಸಲಾಗದೇ ಕಿ.ಮೀ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ವಾಹನ ಕೆಟ್ಟು ನಿಂತಿದ್ದರಿಂದ ಒಂದು ಬದಿ ವಾಹನ ಸಾಗಲು ಹರಸಾಹಸ ಪಡಬೇಕಾಯಿತು.ವಾರಾಂತ್ಯ ಆದುದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು.ಸಂಜೆ ಏಳು ಗಂಟೆ ವರೆಗೂ ವಾಹನ ರಿಪೇರಿ ಮಾಡಲಾಗುತ್ತಿತ್ತು.ಆದರೂ ಟ್ರಾಫಿಕ್ ಜಾಮ್ ನಿಂದ ಜನರು ತೊಂದರೆ ಅನುಭವಿಸಬೇಕಾಯಿತು ಎಂದು ಪ್ರಯಾಣಿಕ ಸತೀಶ್ ಪತ್ರಿಕೆಗೆ ತಿಳಿಸಿದ್ದಾರೆ.


Spread the love

About Laxminews 24x7

Check Also

ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ

Spread the love ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿ ಹಾಗೂ ಉಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ