ಸಿರವಾರ (ರಾಯಚೂರು ಜಿಲ್ಲೆ): ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ವ್ಯಾಪ್ತಿಯ ಸಿರವಾರ ತಾಲ್ಲೂಕಿನ ಮಲ್ಲಟ ಉಪವಿಭಾಗದ ಶಾಖಾಧಿಕಾರಿ, ಕಿರಿಯ ಎಂಜಿನಿಯರ್ ಹಣಮಂತ್ರಾಯ ಡಿ. ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಮಾಡಲಾಗಿದೆ.
ಮಲ್ಲಟ ಗ್ರಾಮದ ಶಾಂಭವಿ ದಮ್ ಬಿರಿಯಾನಿ ದಾಬಾಗೆ ಲಿಂಗಸುಗೂರು ರಸ್ತೆಯ ಸ್ಥಾವರದಿಂದ ಅನಧಿಕೃತವಾಗಿ 25 ಕೆವಿಎ ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಮಾಪಕ ಅಳವಡಿಸಿ ಕಂಪನಿಗೆ ₹1.46 ಲಕ್ಷ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ ಎಂದು ಜೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ್ದ ವರದಿಯನ್ನು ಆಧರಿಸಿ, ಜೆಸ್ಕಾಂ ಬಳ್ಳಾರಿ ಅಧೀಕ್ಷಕ ಅಭಿಯಂತರ ಹಾಗೂ ಶಿಸ್ತು ಪ್ರಾಧಿಕಾರಿ ಬಿ.ವೆಂಕಟೇಶಲು ಅವರು ತಕ್ಷಣ ಜಾರಿಗೆ ಬರುವಂತೆ ಬುಧವಾರ ಅಮಾನತು ಆದೇಶ ನೀಡಿದ್ದಾರೆ.
Laxmi News 24×7