Breaking News

ಮಾರಾಮಾರಿ ಹಂತಕ್ಕೆ ಒಂದೇ ಪಕ್ಷದ ಇಬ್ಬರು ಎಂಎಲ್​​ಎಗಳ ಬ್ರದರ್ಸ್​​​!

Spread the love

ವಿಜಯಪುರ: ಒಂದೇ ಪಕ್ಷದ ಇಬ್ಬರು ಎಂಎಲ್​​​ಎಗಳ ಸಹೋದರರು ಮಾರಾಮಾರಿ ಹಂತಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರೂ ಕಾಂಗ್ರೆಸ್​​ ಶಾಸಕರ ಸಹೋದರರೇ. ಒಬ್ಬ ಕಾಂಗ್ರೆಸ್​​​​ ಪಕ್ಷದ ಶಾಸಕ ಎಂ.ಬಿ. ಪಾಟೀಲ್ ಸಹೋದರ,​​​​ ಮತ್ತೊಬ್ಬ ಅದೇ ಕಾಂಗ್ರೆಸ್​​​​ ಪಾರ್ಟಿ ಶಾಸಕ ಶಿವಾನಂದ ಪಾಟೀಲ್​​​​ ಸಹೋದರ.

 

ಈ ಇಬ್ಬರು ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ತಹಸೀಲ್ದಾರ್​​ ಕಚೇರಿಯ ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ.

ಇಬ್ಬರ ಗಲಾಟೆಗೆ ಕಾರಣ ಒಂದೇ: ತಳವಾರ ಸಮುದಾಯಕ್ಕೆ ಎಸ್​​.ಟಿ ಸರ್ಟಿಫಿಕೇಟ್ ನೀಡಿದ್ದು ಯಾರು ಎಂಬುದು.​​​ ಎಂ.ಬಿ. ಪಾಟೀಲ್​​​ ಸಹೋದರ ಸುನೀಲ್​​ಗೌಡ ಪಾಟೀಲ್,​​​​​​ ‘ಸಿದ್ದರಾಮಯ್ಯ ಅವಧಿಯಲ್ಲಿ ಎಸ್​​​​ಟಿ ಮೀಸಲಾತಿ ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗಿತ್ತು..’ ಎಂದು ಹೇಳಿದರು. ಇನ್ನು ಕಾಂಗ್ರೆಸ್​​ ಶಾಸಕ ಶಿವಾನಂದ ಪಾಟೀಲ್​​ ಸಹೋದರ ಮತ್ತು ಬಿಜೆಪಿ ಮುಖಂಡನೂ ಆಗಿರುವ ವಿಜುಗೌಡ ಪಾಟೀಲ್​​​​, ‘ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ನೀಡಲಾಗಿರುವುದು, ಇದಕ್ಕೆ ಸಿದ್ದರಾಮಯ್ಯ ಕಾರಣ ಅಲ್ಲವೇ ಅಲ್ಲ..’ ಎಂದು ಪ್ರತಿದಾಳಿ ನಡೆಸಿದರು.

ಸಿದ್ದರಾಮಯ್ಯ ಪರ ವಿಧಾನ ಪರಿಷತ್ ಸದಸ್ಯ ಸುನೀಲ್​​​ಗೌಡ ಪಾಟೀಲ್​​​​ ವಾದ ಮುಂದುವರೆಸಿದಾಗ, ಬೊಮ್ಮಾಯಿ ಪರ ಬಿಜೆಪಿ ಮುಖಂಡ ವಿಜುಗೌಡ ವಾಗ್ಯುದ್ಧ ನಡೆಸಿದರು. ಇವರಿಬ್ಬರ ವಾದ-ಪ್ರತಿವಾದ ಮಾರಾಮಾರಿ ಹಂತಕ್ಕೆ ಹೋಗುವುದನ್ನು ಗಮನಿಸಿದ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್​​​ ಮಧ್ಯೆ ಪ್ರವೇಶಿಸಿ, ಇಬ್ಬರನ್ನೂ ಸಮಾಧಾನ ಪಡಿಸಿದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ