Breaking News

ಬೆಳೆ ಸಾಲ ಮನ್ನಾದಿಂದ ವಂಚಿತ ರೈತರಿಂದ ಉಪವಾಸ ಸತ್ಯಾಗ್ರಹ

Spread the love

2018ರಲ್ಲಿ ಬೆಳೆಸಾಲ ಮನ್ನಾ ಮಾಡಿದ ಕರ್ನಾಟಕ ಸರ್ಕಾರ ಇದುವರೆಗೂ ನಿಪ್ಪಾಣಿ ತಾಲ್ಲೂಕಿನ ಭೊಜ ಗ್ರಾಮದ ೮೩
ಹೆಚ್ಚು ರೈತರ ಸಾಲ ಮನ್ನಾ ಆಗಿಲ್ಲ ಎಂದು ಉಪವಾಸ ಸತ್ಯಾಗ್ರಹ ಮಾಡಿದ ಘಟನೆ ನಡೆಯಿತು.

ಹೌದು ೨೦೧೮ರಲ್ಲಿ ಬೆಳೆಸಾಲ ಮನ್ನಾ ಮಾಡಿದ ಕರ್ನಾಟಕ ಸರ್ಕಾರದ ಆಗಿನ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರ ಅಧಿಕಾರ ಅವದಿಯಲ್ಲಿ ರೈತರಬೆಳೆಸಾಲ ಮನ್ನಾಮಾಡಿದ್ದ ಸರಕಾರ ಪ್ರತಿ ರೈತರಿಗೆ ಸುಮಾರು ಒಂದು ಲಕ್ಷ ರೂಪಾಯಿಗಳವರೆಗೆ ರೈತರ ಖಾತೆಗಳಲ್ಲಿ ಜಮಾಮಾಡಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳೆ ಕಳೆದರೂ ಕೂಡ ಭೊಜ ಗ್ರಾಮದ ೮೩ ಯಾವುದೇ ರೀತಿಯ ಒಂದು ರೂಪಾಯಿ ಕೂಡ ಜಮಾ ಆಗಿಲ್ಲ ಎಂದು ಇಲ್ಲಿನ ರೈತರು ಪಿಕೆಪಿಎಸ್ ಸಹಕಾರಿ ಸಂಘ ದ ಎದುರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ ಘಟನೆ ನಡೆಯಿತು.

ಉಪವಾಸ ಸತ್ಯಾಗ್ರಹವನ್ನು ಆರಂಭಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ರೈತರಿಗೆ ಬೆಂಬಲವನ್ನು ನೀಡಲು ಆಗಮಿಸಿದ ಚಿಕ್ಕೋಡಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಜು ಪೊವಾರ ರವರು ಮಾತನಾಡಿದ ಅವರು ಯಾವುದೇ ರೈತರಿಗೆ ಅನ್ಯಾಯವಾಗದಂತೆ ಸರಕಾರ ಕ್ಕೆ ಒತ್ತಾಯ ಮಾಡುವುದ್ದಾಗಿ ತಿಳಿಸಿದರು

ರೈತರ ಸತ್ಯಾಗ್ರಹದ ಸುದ್ದಿತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕೋಡಿ ಸಹಕಾರಿ ಸಂಘಗಳ ಸಹಾಯಕ ನಿಬಂದಕರಾದ ಎಮ್ ಎಸ್ ಗೌಡಪ್ಪನವರ, ಸಹಾಯಕ ಅಮೀತ ಶಿಂದೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಲು ಲಿಖಿತ ಭರವಸೆ ನೀಡಿ
ರೈತರ ಮನವೊಲಿಸುವುಲ್ಲಿ ಯಶಸ್ವಿಯಾದರು.


Spread the love

About Laxminews 24x7

Check Also

ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ

Spread the love ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ ಖಾನಾಪೂರ ತಾಲೂಕಿನ ಗುಂಜಿ ಬಳಿಯಿರುವ ಕಿರಾವಾಳೆಯ ಪ್ರಸಿದ್ಧ ಗೋರಕ್ಷನಾಥ ಮಠದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ