ಬೆಂಗಳೂರು: ಕೊರೊನಾ ಕಂಟ್ರೋಲ್ ಮಾಡಲು ರಾಜ್ಯ ಸರ್ಕಾರ ಬಸ್ ಪ್ರಯಾಣಿಕರಿಗೆ ಮತ್ತೆ ಹಳೆಯ ನಿಯಮಗಳನ್ನು ಜಾರಿಗೆ ತಂದಿದೆ.ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‍ಗೆ ಬರುತ್ತಿಲ್ಲ. ಇದರಿಂದ ಎತ್ತಚ್ಚ ರಾಜ್ಯ ಸರ್ಕಾರ ಈಗ ಟಫ್ ರೂಲ್ಸ್ ಗಳ ಮೊರೆ ಹೋಗಿದೆ. ಮಾಸ್ಕ್ ಧರಿಸದವರಿಗೆ ನಗರದಲ್ಲಿ ಸಾವಿರ ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸಲು ತೀರ್ಮಾನ ಮಾಡಿದೆ. ಅಂತಯೇ ಬಸ್ ಪ್ರಯಾಣಿಕರಿಗೂ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಕೊರೊನಾ ಕಂಟ್ರೋಲ್‍ಗೆ ಬಸ್‍ಗಳಲ್ಲಿ ಹಳೇ ರೂಲ್ಸ್ ಜಾರಿ ತಂದಿದೆ. ಜೊತೆಗೆ ಶೇ.50ರಷ್ಟು ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಬಸ್‍ಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ ಪಾಲಿಸಲೇಬೇಕು. ಮೊದಲಿದ್ದಂತೆ ಸೀಟ್ ಬಿಟ್ಟು ಸೀಟ್ ಕುಳಿತುಕೊಳ್ಳಬೇಕು. ಬಸ್‍ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಮಾಸ್ಕ್ ಕಡ್ಡಾಯ ಧರಿಸಬೇಕು. ಬಸ್‍ಗಳಲ್ಲಿ ನಿಂತು ಪ್ರಯಾಣ ಮಾಡುವುದಕ್ಕೆ ಇನ್ನೂ ಮುಂದೆ ಅವಕಾಶವಿರುವುದಿಲ್ಲ.

ಸಾರಿಗೆ ವ್ಯವಸ್ಥೆಯಲ್ಲಿ ಶೇ. 50ರಷ್ಟು ಮಾತ್ರ ಸಂಚಾರಕ್ಕೆ ಅವಕಾಶ ಎಂಬ ಆದೇಶಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಎಂಟಿಸಿ ಬಸ್‍ಗಳು ಕಡಿಮೆ ಸಂಖ್ಯೆಯಲ್ಲಿ ಓಡಾಡುತ್ತಿವೆ. ಹೀಗಿರುವಾಗ ಸಿಕ್ಕ ಬಸ್ಸುಗಳಿಗೆ ಪ್ರಯಾಣ ಮಾಡಬೇಕು. ಈ ವೇಳೆ ಪ್ರಯಾಣಿಕರ ಸಂಖ್ಯೆಯು ಹೆಚ್ಚಿರುತ್ತೆ. ಕೇವಲ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಅಂದ್ರೆ ಉಳಿದವರು ನಡೆದುಕೊಂಡು ಹೋಗಬೇಕಾ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತುಂಬಿದ ಬಸ್ಸುಗಳಲ್ಲಿ ಸಂಚಾರ ಮಾಡೋಕೆ ಭಯ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Laxmi News 24×7