ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಕೆಎಲ್‍ಇ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯ ಕ್ರೀಡಾಂಗಣದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಎಂಟು ತಾಲೂಕಗಳಿಂದ ಪುರುಷ ಹಾಗೂ ಮಹಿಳಾ ಕಬ್ಬಡ್ಡಿ ತಂಡಗಳಿಂದ ಕಬ್ಬಡಿ ಸ್ಪರ್ಧೆಗಳು ಜರುಗಿದವು.
ಮಂಗಳವಾರ ಬೆಳಗೆ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಪರಿಷತ್ ಮಹಾಂತೇಶ್ ಕವಟಿಗಿಮಠ್ ಇವರು ಹಾಗೂ ಇತರ ಗಣ್ಯರಿಂದ ಬಲೂನ್‍ಗಳ ಹಾರಿಸುವ ಮುಖಾಂತರ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಮಾಜಿ ವಿಧಾನ ಪರಿಷತ್ತಿನ ಸದಸ್ಯ ಹಾಗೂ ಕೆಎಲ್‍ಇ ಸಂಸ್ಥೆಯ ಪ್ರಮುಖರಾದ ಮಹಾಂತೇಶ್ ಕವಟಗಿಮಠ ಮಾತನಾಡಿ, ಸಮಾಜದಲ್ಲಿ ಪ್ರತಿ ಒಬ್ಬ ಯುವಕನ ಆರೋಗ್ಯ ಸದೃಢವಾಗಿ ಇರಬೇಕು. ನಿರಂತರವಾಗಿ ಯೋಗ ನ್ಯಾಯತರ ದೇಶಿ ಆಟಗಳು ಆಡತಿರಬೇಕು. ಕೃಷ್ಣ ಪರಮಾತ್ಮನು ಕಬ್ಬಡಿ ಆಟ ಆಡಿದ ಬಗ್ಗೆ ಉಲ್ಲೇಖವಿದೆ. ಕ್ರೀಡೆಗಳಲ್ಲಿ ಎಲ್ಲರೂ ಭಾಗವಹಿಸಬೇಕು, ಸೋಲು ಗೆಲುವು ಮುಖ್ಯ ಅಲ್ಲ. ಇದು ಒಂದ ನಿರಂತರ ಪ್ರಕ್ರಿಯೆ. ಇಂದಿನ ಯುವಕರು ದುಷ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅನೇಕ ಯುವಕರು ತಂಬಾಕು, ಗುಟುಕ ಸೇವಿಸುತ್ತಿದ್ದಾರೆ. ಈ ಮೊದಲು ಮಕ್ಕಳು ತಂದೆ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಬರುತ್ತಿದ್ದರು.
ಆದರೆ ಈಗ ತಂದೆ ತಾಯಿಗಳು ಮಕ್ಕಳನ್ನು ಕರೆದುಕೊಂಡು ಆಸ್ಪತ್ರೆಗೆ ಬರುವಂತ ದಿನಮಾನಗಳು ಬಂದಿವೆ ಇದು ಒಂದು ಚಿಂತೆಯ ವಿಷಯ ಎಂದು ಮಾಜಿ ವಿಧಾನ ಪರಿಷತ್ತಿನ ಸದಸ್ಯ ಮಹಾಂತೇಶ್ ಕವಟಗಿಮಠ ಹೇಳಿದರು.