ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರನ್ನು ಭೂಸ್ವಾಧೀನಪಡಿಸಿ ನಿರ್ಮಿಸಲಾಗುತ್ತಿರುವ ರಿಂಗ್‌ರೋಡ್ ಯೋಜನೆಯನ್ನು ವಿರೋಧಿಸಿ ಬೆಳಗಾವಿ ತಾಲೂಕಿನ ರೈತರು ಪ್ರತಿಭಟನೆ ನಡೆಸಿದ್ದಾರೆ. ಇಂದು ಬೆಳಗಾವಿಯಲ್ಲಿ ನಡೆದ ಮಹಾರಾಷ್ಟ್ರ ಏಕೀಕರಣ ತಾಲೂಕಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಭೆಯಲ್ಲಿ ಈ ರಿಂಗ್ ರೋಡ್ ವಿರುದ್ಧದ ಹೋರಾಟ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.
ಹೌದು, ಬೆಳಗಾವಿ ತಾಲೂಕಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರಿಂಗ್ ರೋಡ್ ಮಾಡಲು ಸರ್ಕಾರ ಯೋಜಿಸಿದೆ. ಆದರೆ ಇದರಿಂದ ಫಲವತ್ತಾದ ಭೂಮಿ ಕಳೆದು ರೈತ ಬೀದಿಗೆ ಬರುತ್ತಿದ್ದಾನೆ. ಹಾಗಾಗಿ ರಿಂಗ್ ರೋಡ್‌ಗೆ ಬೆಳಗಾವಿ ತಾಲೂಕಿನ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಭೂಸ್ವಾಧೀನ ಪ್ರಕ್ರಿಯೆನ್ನು ವಿರೋಧಿಸಿ ಬೆಳಗಾವಿ ತಾಲೂಕಾ ಮಹಾರಾಷ್ಟ್ರ ಏಕೀಕರಣ ಸಮಿತಿ ಹೋರಾಟ ಆರಂಭಿಸಿದೆ.
ಈ ಹೋರಾಟದಲ್ಲಿ ರಾಜಕೀಯ ಮಾಡದೆ ರೈತರ ಹಿತಕ್ಕಾಗಿ ಎಲ್ಲ ಸಂಘಟನೆಗಳು ಒಂದಾಗಬೇಕು ಎಂದು ಮನವಿ ಮಾಡಲಾಗಿದೆ. ಅದರಂತೆ ಇಂದು ಬೆಳಗಾವಿಯ ಮರಾಠಾ ಮಂದಿರದಲ್ಲಿ ವಿವಿಧ ಸಂಘಟನೆಗಳ ಸಭೆ ನಡೆಯಿತು. ಈ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಎಲ್ಲರೂ ಒಗ್ಗೂಡಿ ರಿಂಗ್ ರಸ್ತೆ ವಿರುದ್ಧದ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ನಿರ್ಣಯಿಸಲಾಯಿತುಮಾಜಿ ಶಾಸಕ ಮನೋಹರ ಕಿಣೇಕರ ಮಾತನಾಡಿ, ರಿಂಗ್ ರೋಡ್ ಹೆಸರಿನಲ್ಲಿ ಬಡ ರೈತರನ್ನು ಬೀದಿ ತರಲು ಕೆಲವರು ಯೋಜನೆ ರೂಪಿಸಿದ್ದಾರೆ. ಇದರ ವಿರುದ್ಧ ಎಲ್ಲರೂ ಭಿನ್ನಾಭಿಪ್ರಾಯ, ರಾಜಕೀಯ, ಬಣಗಳನ್ನು ಮರೆತು ಒಂದಾಗಬೇಕಿದೆ. ಭೂಸ್ವಾಧೀನ ವಿರೋಧಿಸಿ ನ.೨೮ರಂದು ನಡೆಯಲಿರುವ ಹೋರಾಟದಲ್ಲಿ ಎಲ್ಲರೂ ಭಾಗವಹಿಸಿ ರೈತರನ್ನು ನಾಶ ಮಾಡುವ ಯೋಜನೆಯನ್ನು ಧಿಕ್ಕರಿಸಬೇಕೆಂದು ಕರೆ ನೀಡಿದರು.