ರಾಜಕೀಯವಾಗಿ ಯಾರು ಯಾರು ಬೆಳೆಯುತ್ತಾರೆ, ಪ್ರಬಲವಾಗಿ ಇರುವವರನ್ನ ಕ್ರಿಮಿನಲ್ ಮಾಡಿದ್ದಾರೆ. ಯಾರು ಕಂಡ್ರೇ ಅವರಿಗೆ ಹೆದರಿಕೆ ಇರುತ್ತೋ ಅವರ ಮೇಲೆ ಕೇಸ್‍ಗಳನ್ನ ಹಾಕುವುದು ತೊಂದರೆ ಕೊಡುವುದು ಮಾಡ್ತಾರೆ. ಹೀಗಾಗಿ ವಿನಯ್ ಕುಲಕರ್ಣಿ ಮೇಲೆ ಪೆÇಲೀಸರು ಬಿ ರಿಪೆÇೀರ್ಟ್ ಸಲ್ಲಿಸಿದ್ದನ್ನ ಸಿಬಿಐಗೆ ಒಪ್ಪಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಪಕ್ಷದ ಸಂಘಟನೆ ದೃಷ್ಠಿಯಿಂದ ನಾಯಕರು, ಅವರ ಅಭಿಮಾನಿಗಳು, ಕಾರ್ಯಕರ್ತರು ಹುಟ್ಟುಹಬ್ಬ ಮಾಡ್ತಾರೆ. ಧಾರವಾಡಕ್ಕೆ ಹೋಗಲು ಕೋರ್ಟ ನಿಬರ್ಂಧ ಹೇರಿದೆ. ಹೀಗಾಗಿ ಪಕ್ಕದ ಕ್ಷೇತ್ರದಲ್ಲಿ ಅವರ ಕಾರ್ಯಕ್ರಮ ಮಾಡ್ತಿದ್ದಾರೆ. ಬರ್ತಡೇ ಆಚರಣೆಯಲ್ಲಿ ಒಬ್ಬೊಬ್ಬರದು ಒಂದೊಂದು ಶೈಲಿ ಇರುತ್ತೆ. ನಾನು ಕೇದಾರನಾಥಕ್ಕೆ ಹೋಗಿದ್ದೆ, ಒಬ್ಬೊಬ್ಬರು ಆಸ್ಪತ್ರೆಗೆ ಹೋಗಿ ಹಣ್ಣು ಹಂಪಲ ಕೊಟ್ಟು ಆಚರಿಸ್ತಾರೆ. ಆಗಸ್ಟ 3ನೇ ತಾರೀಖು ಸಿದ್ದರಾಮಯ್ಯನವ್ರ ಬರ್ತಡೇಯನ್ನ ಅವರ ಅಭಿಮಾನಿಗಳು ಆಚರಿಸಿದ್ರು. ವಿನಯ್ ಕುಲಕರ್ಣಿ ಎರಡ್ಮೂರು ಬಾರಿ ಶಾಸಕರಾಗಿದ್ದವರು. ಕಾರ್ಯಕರ್ತರ ಭಾವನೆಗೆ ಅನುಗುಣವಾಗಿ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತದೆ. ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ, ಬೆಳಗಾವಿ ಜಿಲ್ಲೆ ಜವಾಬ್ದಾರಿ ಕೊಟ್ಟಿದ್ದೇವೆ ಎಂದರು.
ಕೊಲೆ, ಕ್ರಿಮಿನಲ್ ಆರೋಪಿ ಹುಟ್ಟು ಹಬ್ಬ ಅದ್ದೂರಿಯಾಗಿ ಆಚರಣೆ ಮಾಡ್ತಿದ್ದಾರೆ ಎಂಬ ಬಿಜೆಪಿಯವರ ಟೀಕೆಗೆ ಬಿಜೆಪಿಯವರು ನನ್ನೂ ಕ್ರಿಮಿನಲ್ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನೂ ಸಹ ಕ್ರಿಮಿನಲ್ ಮಾಡಿದ್ದಾರೆ. ರಾಜಕೀಯವಾಗಿ ಯಾರು ಯಾರು ಬೆಳೆಯುತ್ತಾರೆ, ಪ್ರಬಲವಾಗಿ ಇರುವವರನ್ನ ಕ್ರಿಮಿನಲ್ ಮಾಡಿದ್ದಾರೆ. ಯಾರು ಕಂಡ್ರೇ ಅವರಿಗೆ ಹೆದರಿಕೆ ಇರುತ್ತೋ ಅವರ ಮೇಲೆ ಕೇಸ್‍ಗಳನ್ನ ಹಾಕುವುದು ತೊಂದರೆ ಕೊಡುವುದು ಮಾಡ್ತಾರೆ. ವಿನಯ್ ಕುಲಕರ್ಣಿ ಮೇಲೆ ಪೆÇಲೀಸರು ಬಿ ರಿಪೆÇೀರ್ಟ್ ಸಲ್ಲಿಸಿದ್ದನ್ನ. ರಾಜಕೀಯ ಉದ್ದೇಶದಿಂದ ಬಿಜೆಪಿಯವರು ಪ್ರಭಾವ ಬೀರಿ ಸಿಬಿಐಗೆ ವಹಿಸಿದ್ದಾರೆ. ಸಿಬಿಐ ಯಾವ ರೀತಿ ಕೆಲಸ ಮಾಡ್ತಿದೆ ನಾನೇನು ಬಿಡಿಸಿ ಹೇಳಬೇಕಾಗಿಲ್ಲ. ವಿನಯ್‍ಗೆ ಧಾರವಾಡಕ್ಕೆ ನಿಬರ್ಂಧ ನ್ಯಾಯಾಲಯದ ಹಕ್ಕನ್ನ ನಾನು ಪ್ರಶ್ನಿಸುವುದಿಲ್ಲ ಎಂದು ಡಿಕೆಶಿ ಹೇಳಿದರು.