Breaking News

ಯುಪಿಎಸ್‍ಸಿ ಪೂರ್ವ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ

Spread the love

ನವದೆಹಲಿ,ಸೆ.30- ಕೇಂದ್ರ ಲೋಕಸೇವಾ ಆಯೋಗ ಅಕ್ಟೋಬರ್ 4ರಂದು ನಡೆಸಲು ಉದ್ದೇಶಿಸಿರುವ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಳನ್ನು ಮುಂದೂಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ಅ.4ರಂದು ಯುಪಿಎಸ್‍ಸಿ ಪ್ರಿಲಿಮ್ಸ್ ಪರೀಕ್ಷೆ ಅಬಾತವಾಗಿದೆ.

ಕೊರೊನಾ ಹಾವಳಿ ಮತ್ತು ಕೆಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಎರಡು ತಿಂಗಳ ಮಟ್ಟಿಗೆ ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆಗಳನ್ನು ಮುಂದೂಡುವಂತೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿತು.

ನ್ಯಾಯಮೂರ್ತಿಗಳಾದ ಎ.ಎಂ.ಕಾನ್ವಿಲ್ಕರ್, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ, ಅಕ್ಟೋಬರ್ 4ರಂದು ಯುಪಿಎಸ್‍ಸಿ ಪರೀಕ್ಷೆಗಳನ್ನು ನಡೆಸಬೇಕು.

ಈ ಹಿಂದೆ ಕೊರೊನಾ ಪಿಡುಗಿನಿಂದ ಪರೀಕ್ಷೆಗೆ ಹಾಜರಾಗಲು ವಂಚಿತರಾದ ಅಭ್ಯರ್ಥಿಗಳಿಗೂ ಕೊನೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

2020 ಮತ್ತು 2021ರ ಯುಪಿಎಸ್‍ಸಿ ಪರೀಕ್ಷೆಗಳನ್ನು ಒಟ್ಟಿಗೆ ನಡೆಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸಹ ಸರ್ವೋನ್ನತ್ತ ನ್ಯಾಯಾಲಯ ವಜಾಗೊಳಿಸಿದೆ.


Spread the love

About Laxminews 24x7

Check Also

ಶಿವಾಜಿ ಮಹಾರಾಜರು ದಾರ್ಶನಿಕ ನಾಯಕ : ಪ್ರಧಾನಿ ಮೋದಿ

Spread the loveನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜರು ದಾರ್ಶನಿಕ ನಾಯಕ, ಅಸಾಧಾರಣ ಆಡಳಿತಗಾರ ಮತ್ತು ಕಾರ್ಯತಂತ್ರದ ಚಿಂತಕ,ಅವರ ಧೈರ್ಯ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ