Breaking News

ಒಂದು ವಾರದಿಂದ ಸುರಿದ ಭಾರಿ ಮಳೆಗೆ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಹಳ್ಳದ ನೀರಿಗೆ ರೈತರ ಬೆಳೆ ಕೊಚ್ಚಿ ಹೋಗಿದೆ.

Spread the love

ರಾಯಚೂರು: ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿದ ಭಾರಿ ಮಳೆಗೆ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಹಳ್ಳದ ನೀರಿಗೆ ರೈತರ ಬೆಳೆ ಕೊಚ್ಚಿ ಹೋಗಿದೆ. ಹೀಗಾಗಿ ದೇವದುರ್ಗ ಶಾಸಕ ಶಿವನಗೌಡ ನಾಯಕ್ ವಿರುದ್ಧ ಗಬ್ಬೂರಿನ ರೈತ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಸಿರವಾರ-ಗಬ್ಬೂರು ಮಧ್ಯೆ ಹಳ್ಳಕ್ಕೆ ಸೇತುವೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದಕ್ಕೆ ನಮ್ಮ ಬೆಳೆ ಕೊಚ್ಚಿ ಹೋಗಿದೆ ಎಂದು ಶಾಸಕರ ವಿರುದ್ಧ ರೈತ ಗರಂ ಆಗಿದ್ದಾನೆ.

ಕೋಟಿಗಟ್ಟಲೆ ಅನುದಾನ ತಂದಿದ್ದೇನೆ ಎನ್ನುವ ಶಾಸಕರು ಇನ್ನೂ ಸೇತುವೆಯನ್ನು ಯಾಕೆ ನಿರ್ಮಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಇಂತಹ ಲೂಟಿಕೋರರನ್ನ ನಾಲ್ಕೈದು ಬಾರಿ ಆರಿಸಿ ತರುತ್ತಾರೆ. ಇವರೆಲ್ಲ ಏನು ಅಭಿವೃದ್ಧಿ ಮಾಡುತ್ತಾರೆ. ಓಟ್ ಹಾಕಿಸಿಕೊಳ್ಳುವಾಗ ಬಂದು ಕಾಲ್ ಹಿಡ್ಕೊಂಡ್ತಾರೆ ಪಾದ ತೊಳೀತಾರೆ.

ಆದರೆ ಶಾಸಕ ಶಿವನಗೌಡ ನಾಯಕ್ ಒಮ್ಮೆಯೂ ಹಳ್ಳಿಗೆ ಬಂದಿಲ್ಲ. ದೇವದುರ್ಗ, ರಾಯಚೂರಿನಲ್ಲಿ ಮಾತ್ರವೇ ಸಭೆ ನಡೆಸುತ್ತಾರೆ. ಒಂದು ದಿನವಾದ್ರೂ ರೈತರ ಕಷ್ಟ ಏನು ಅಂತ ಕೇಳಿಲ್ಲ. ಇಂತವರನ್ನು ನಾವು 4-5 ಬಾರಿ ಆರಿಸ್ತೀವಿ ಎಂದು ರೈತನ ಆಕ್ರೋಶ ವ್ಯಕ್ತಪಡಿಸಿದ್ರು ಸದ್ಯ ಈಗ ರೈತ ಶಾಸಕನ ವಿರುದ್ಧ ರೊಚ್ಚಿಗೆದ್ದ ವಿಡಿಯೋ ಫುಲ್ ವೈರಲ್ ಆಗಿದೆ.


Spread the love

About Laxminews 24x7

Check Also

ಬಾಗಲಕೋಟೆ ಕಲ್ಲು ತೂರಾಟ ಪ್ರಕರಣ – ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಯಾಕೆ ಹೀಗಾಗುತ್ತೆ: ಜೋಶಿ ಪ್ರಶ್ನೆ

Spread the loveರಾಯಚೂರು: ಬಾಗಲಕೋಟೆಯಲ್ಲಿ  ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ  ನಡೆದಿದೆ. ನಿಮ್ಮ ಸರ್ಕಾರ ಬಂದಾಗಲೇ ಯಾಕೇ ಹೀಗಾಗುತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ