ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಯುವಾ ಮೊರ್ಚಾದ ವತಿಯಿಂದ ಬಸ ತಂಗುದಾಣಗಳ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.
ಭಾನುವಾರದಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತ ಮತ್ತು ಸರದಾರ ಕಾಲೇಜು ಮೈದಾನದ ಹತ್ತಿರದ ಬಸ್ ತಂಗುದಾಣಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕೈಯಲ್ಲಿ ಪೊರಕೆ ಮತ್ತು ನೀರಿನ ಪೈಪ್ ಹಿಡಿದ ಕಾರ್ಯಕರ್ತರು ಕಸವನ್ನು ಗುಡಿಸಿ ನೀರು ಹಾಕಿ ತಂಗುದಾಣಗಳನ್ನು ಶುಚಿಗೊಳಿಸಿದರು.
ಈ ಸಂದರ್ಭದಲ್ಲಿ ಉತ್ತರ ಶಾಸಕರು ಮತ್ತು ಮಹಾನಗರ ಅಧ್ಯಕ್ಷರು,ಯುವ ಮೊರ್ಚಾ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಪ್ರಮುಖ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಎಲ್ಲ ಪಧಾಧಿಕಾರಿಗಳು ಉಪಸ್ಥಿತರಿದ್ದರು.