Breaking News
Home / ರಾಜಕೀಯ / ಖಾನಾಪುರದ ‘ತಂದೂರಿ ಭಟ್ಟಿ’ ಸ್ವಿಟ್ಜರ್‌ಲೆಂಡ್‌ಗೆ

ಖಾನಾಪುರದ ‘ತಂದೂರಿ ಭಟ್ಟಿ’ ಸ್ವಿಟ್ಜರ್‌ಲೆಂಡ್‌ಗೆ

Spread the love

ಖಾನಾಪುರ: ತಂದೂರಿ ರೋಟಿ, ತಂದೂರಿ ನಾನ್, ತಂದೂರಿ ಕಬಾಬ್, ತಂದೂರಿ ಚಿಕನ್, ತಂದೂರಿ ಪಿಜ್ಜಾ, ತಂದೂರಿ ಚಹಾ… ಹೋಟೆಲ್ ಹಾಗೂ ಧಾಬಾಗಳಲ್ಲಿ ಸಿಗುವ ಈ ಖಾದ್ಯಗಳ ಹೆಸರು ಕೇಳಿದಾಗ ಬಾಯಲ್ಲಿ ನೀರೂರುವುದು ಸಹಜ. ಇವುಗಳ ತಯಾರಿಕೆಗೆ ಅಗತ್ಯವಿರುವ ಭಟ್ಟಿಗಳನ್ನು ತಯಾರಿಸುವಲ್ಲಿ ಖಾನಾಪುರದ ಕುಂಬಾರರು ಖ್ಯಾತಿ ಗಳಿಸಿದ್ದಾರೆ.

 

ಮಾರುಕಟ್ಟೆಯ ಬೇಡಿಕೆಯಂತೆ ಇಲ್ಲಿನ ಕುಂಬಾರರು ತಯಾರಿಸಿದ ತಂದೂರಿ ಭಟ್ಟಿಗಳು, ಕರ್ನಾಟಕ ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಗೂ ಮಾರಾಟವಾಗುತ್ತಿವೆ.

ತಯಾರಿಕೆ ಹೇಗೆ?: ‘ಸ್ಥಳೀಯವಾಗಿ ಲಭ್ಯವಿರುವ ಜೇಡಿ ಮಣ್ಣು, ಬಿಳಿ ಮಣ್ಣು ಹಾಗೂ ನದಿಯಲ್ಲಿ ದೊರೆಯುವ ಮರಳು ಬೆರೆಸಿ ತಂದೂರಿ ಭಟ್ಟಿ ತಯಾರಿಸಲಾಗುತ್ತದೆ. ಒಂದು ಭಟ್ಟಿ ತಯಾರಿಕೆಗೆ 15 ದಿನ ಬೇಕಾಗುತ್ತದೆ. ಗ್ರಾಹಕರ ಬೇಡಿಕೆಯಂತೆ ವಿವಿಧ ಗಾತ್ರ, ವಿನ್ಯಾಸಗಳಲ್ಲಿ ಭಟ್ಟಿ ತಯಾರಾಗುತ್ತವೆ. ಪ್ರತಿ ಭಟ್ಟಿ ದರ ಅಂದಾಜು ₹3 ಸಾವಿರದಿಂದ ₹5 ಸಾವಿರ ಇದೆ’ ಎಂದು ತಂದೂರಿ ಭಟ್ಟಿಗಳ ತಯಾರಕ ಶಂಕರ ಕುಂಬಾರ ‘ ತಿಳಿಸಿದರು.

‘ಸ್ವಿಟ್ಜರ್‌ಲೆಂಡ್‌ನಿಂದ ಇತ್ತೀಚೆಗೆ ಗೋವಾಗೆ ಬಂದಿದ್ದ ಕೆಲವು ಪ್ರವಾಸಿಗರು, ತಾವು ತಂಗಿದ್ದ ಪಂಚತಾರಾ ಹೋಟೆಲ್‌ನಲ್ಲಿ ನೀಡಲಾದ ತಂದೂರಿ ರೋಟಿ, ಕಬಾಬ್ ಹಾಗೂ ಬರ್ಗರ್‌ಗಳನ್ನು ಸೇವಿಸಿ ಖುಷಿಪಟ್ಟರು. ಈ ಖಾದ್ಯಗಳನ್ನು ತಯಾರಿಸುವ ಭಟ್ಟಿಗಳ ಬಗ್ಗೆ ಮಾಹಿತಿ ಪಡೆಯಲು ಖಾನಾಪುರಕ್ಕೆ ಬಂದಿದ್ದರು. ತಮ್ಮ ದೇಶಕ್ಕೆ ಮರಳುವಾಗ, ಇಲ್ಲಿ ತಯಾರಾದ ಭಟ್ಟಿ ತೆಗೆದುಕೊಂಡು ಹೋಗಿದ್ದಾರೆ. ನಂತರ, ಆ ಭಟ್ಟಿಯಲ್ಲಿ ತಾವೇ ಆಹಾರ ಖಾದ್ಯ ತಯಾರಿಸಿ, ನಮ್ಮೊಂದಿಗೆ ಖುಷಿ ಹಂಚಿಕೊಂಡಿದ್ದಾರೆ’ ಎಂದು ರವಿ ಕಾಡಗಿ ಹೇಳಿದರು.

‘ಖಾನಾಪುರದ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆಯಲ್ಲಿ ಆಸಕ್ತರಿಗೆ ಕುಂಬಾರಿಕೆ ಕಲೆ ತರಬೇತಿ ನೀಡಿ, ಸ್ವ ಉದ್ಯಮ ಕೈಗೊಳ್ಳಲು ಮಾರ್ಗದರ್ಶನ ನೀಡುತ್ತಿದ್ದೇವೆ. ಇಲ್ಲಿ ಮಣ್ಣಿನ ಉತ್ಪನ್ನಗಳು, ಆಲಂಕಾರಿಕ ಗೊಂಬೆಗಳು, ತಂದೂರಿ ಭಟ್ಟಿ, ಒಲೆಗಳು ಮತ್ತಿತರ ವಸ್ತುಗಳನ್ನು ತಯಾರಿಸುವ ಕಲೆ ಕರಗತ ಮಾಡಿಸುತ್ತಿದ್ದೇವೆ’ ಎನ್ನುತ್ತಾರೆ ಅಧಿಕಾರಿ ಗೋವರ್ಧನ.


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ