Breaking News

ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಮುಗಿಸಿದ್ಳು!

Spread the love

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಪತ್ನಿಯೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯ ಯಲಹಂಕದಲ್ಲಿ ನಡೆದಿದೆ.

ಮೃತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಚಂದ್ರಶೇಖರ್ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಹಿಂದೂಪುರ (Hindupura) ದ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಚಂದ್ರಶೇಖರ್ (Chandrashekhar) ಮತ್ತು ಶ್ವೇತಾ (Shwetha) ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆ (Marriage) ಯಾಗಿದ್ದರು. ಇಬ್ಬರ ನಡುವೆ ಹದಿನಾರು ವರ್ಷದ ಅಂತರ ಇತ್ತು. ಆದರೂ ಅಕ್ಕನ ಮಗಳು ಅನ್ನೋ ಕಾರಣಕ್ಕೆ ಮನೆಯವರು ಬಲವಂತದಿಂದ ಮದುವೆ ಮಾಡಿಸಿದ್ದರು. ಮದುವೆಯಾದ ಬಳಿಕ ಇಬ್ಬರ ಸಂಸಾರ ಸರಿ ಇರಲಿಲ್ಲ. ಶ್ವೇತಾಗೆ ಕಾಲೇಜು ಗೆಳೆಯರು ಹಾಗೂ ಬೇರೆ ಸ್ನೇಹಿತರ ವಿಚಾರಕ್ಕೆ ಹಲವಾರು ಬಾರಿ ಜಗಳ ಆಗಿದೆ. ಇತ್ತ ಸುರೇಶ್ ಎಂಬಾತನ ಜೊತೆಗೂ ಶ್ವೇತಾ ಸಂಪರ್ಕದಲ್ಲಿದ್ದಳು. ಇಷ್ಟು ಮಾತ್ರವಲ್ಲದೇ ಪತಿ ಇಲ್ಲದ ಸಮಯದಲ್ಲಿ ಇಬ್ಬರು ಸೇರುತ್ತಿದ್ದರು. ಈ ನಡುವೆ ಪತಿ ಇದ್ದರೆ ಇದೆಲ್ಲಾ ಕಷ್ಟ ಅಂದುಕೊಂಡ ಶ್ವೇತಾಳಿಗೆ ಆತನನ್ನೆ ಇಲ್ಲದಂತೆ ಮಾಡು ಎಂದು ಸುರೇಶ್ ಐಡಿಯಾ ಕೊಟ್ಟಿದ್ದಾನೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ