Breaking News

ಮನೆ ಕಳ್ಳತನ: ಆರೋಪಿಗಳ ಬಂಧನ;15.64 ಲಕ್ಷ ರೂ. ಮೌಲ್ಯದ ಆಭರಣ ವಶ

Spread the love

ಚಿಕ್ಕೋಡಿ: ಹಗಲು ವೇಳೆಯಲ್ಲಿ ಮನೆ ಕೀಲಿ ಮುರಿದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ಸುಮಾರು 15.64 ಲಕ್ಷ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಚಿಕ್ಕೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ದಿ.12 10 2022 ರಂದು ಚಿಕ್ಕೋಡಿ ನಗರದ ವಿಷ್ಣು ಪ್ರಕಾಶ ನೇತಲಕರ ಅವರ ಮನೆ ಕೀಲಿ ಮುರಿದು 370 ಗ್ರಾಂ ಬಂಗಾರ ಆಭರಣ.

1.50 ಲಕ್ಣ ರೂ. ನಗದು ಹಣ ಹೀಗೆ 12.61 ಲಕ್ಷ ರೂ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ದೂರು ನೀಡಿದ್ದರು.

ಪ್ರಕರಣದ ಬೆನ್ನೆತ್ತಿದ್ದ ಚಿಕ್ಕೋಡಿ ಪೊಲೀಸರು ನೇಪಾಳಿ ಮೂಲದ ವಿಜಯಪುರ ವಾಸಿಯಾಗಿರುವ ಒಬ್ಬ ಆರೋಪಿ ಹಾಗೂ ಬೆಳಗಾವಿ ಜಿಲ್ಲೆಯ ಇಬ್ಬರು ಆರೋಪಿಯನ್ನು ಬಂಧಿಸಿ, ಅವರಿಂದ 4 ಹಗಲು ಮನೆಗಳ್ಳತನ ಪ್ರಕರಣ ಭೇದಿಸಿದ್ದಾರೆ.

ಪ್ರಕರಣದ ತನಿಖೆ ಕಾಲಕ್ಕೆ ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಕಬ್ಬಿಣದ ರಾಡ್. 12.50 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ. 1 ಲಕ್ಣ ರೂ ಮೌಲ್ಯದ ಕೆನಾನ ಕಂಪನಿಯ ಕ್ಯಾಮರಾ. 2 ಲಕ್ಷ ರೂ ಮೌಲ್ಯದ ಕೆಟಿಎಂ ಬೈಕ್ ಹೀಗೆ ಒಟ್ಟು 15.64 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಿಕ್ಕೋಡಿ ಡಿವೈಎಸ್ ಪಿ ಬಸವರಾಜ ಯಲಿಗಾರ. ಸಿಪಿಐ ಆರ್.ಆರ್.ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೆ.ಬಿ.ಕಾಂಬಳೆ. ಆರ್.ಆರ್.ಶಿಳನವರ. ಎಂ.ಪಿ.ಸತ್ತಿಗೇರಿ. ಎಸ್.ಪಿ.ಗಲಗಲಿ.ಎಸ್.ಬಡಿಗೇರ. ಸಂತೋಷ ಬಡೋದೆ. ಎಂ.ಎಫ್.ಪಾಟೀಲ. ವಿನೋಧ ಠಕ್ಕನ್ನವರ. ಸಚೀನ ಪಾಟೀಲ ಆರೋಪಗಳನ್ನು ಬಂಧಿಸಿ ಅವರಿಂದ ಚಿನ್ನವನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.


Spread the love

About Laxminews 24x7

Check Also

ಆಡಳಿತ ವ್ಯವಸ್ಥೆ ಕುಸಿದಿದೆ, ನಾನು 2 ದಿನದಲ್ಲಿ ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ: ಶಾಸಕ ರಾಜು ಕಾಗೆ

Spread the loveಚಿಕ್ಕೋಡಿ(ಬೆಳಗಾವಿ): “ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎರಡು ದಿನದಲ್ಲಿ ನಾನು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ