ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿಯ ಶ್ರೀ ಕಪಿಲೇಶ್ವರ ಮಂದಿರದಲ್ಲಿ ಬೆಳಿಗ್ಗೆ 8 ಗಂಟೆಗೆ ಎಲ್ಲ ಪೂಜಾ ಕಾರ್ಯಗಳನ್ನು ಮುಗಿಸಲಾಯಿತು. ವಾ.ಓ: ಹೌದು ಕೇತುಗ್ರಸ್ತ ಸೂರ್ಯ ಗ್ರಹಣ ಹಿನ್ನೆಲೆ ಪ್ರತಿದಿನದಂತೆ ನಡೆಯುವ ಅಭಿಷೇಕ, ರುದ್ರಾಭಿಷೇಕ ಸೇರಿ ಎಲ್ಲಾ ಕ್ರಿಯೆಗಳನ್ನು ಬೆಳಿಗ್ಗೆ 8 ಗಂಟೆಯೊಳಗೆ ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಅರ್ಚಕರು ಪೂರ್ಣಗೊಳಿಸಿದರು. ಬಳಿಕ ಮಧ್ಯಾಹ್ನ ವೇದ ಶುರುವಾಗುವ ಮುಂಚೆ ಶಿವಲಿಂಗವನ್ನು ಪೂರ್ಣವಾಗಿ ಬಿಲ್ವಪತ್ರೆಗಳಿಂದ ಮುಚ್ಚಲಾಯಿತು. ಇದು ಯಾವುದೇ ರೀತಿ ಪರಮಾತ್ಮನಿಗೆ ಸೂರ್ಯನ ಕಿರಣಗಳು ತಾಗಬಾರದು ಎಂಬ ಉದ್ದೇಶದಿಂದ ಗ್ರಹಣ ಸಂದರ್ಭದಲ್ಲಿ ಮೊದಲಿನಂದಲೂ ಈ ಪದ್ಧತಿಯನ್ನು ದೇವಸ್ಥಾನ ಮಂಡಳಿಯವರು, ಅರ್ಚಕರು ಮಾಡಿಕೊಂಡು ಬಂದಿದ್ದಾರೆ. ಸಾಯಂಕಾಲ 4-6 ಗಂಟೆವರೆಗೆ ಮಹಾಮೃತ್ಯುಂಜಯ ಜಪ ಹಮ್ಮಿಕೊಳ್ಳಲಾಗಿದೆ
ಸಾಯಂಕಾಲ 6.30ರ ನಂತರ ಇಡೀ ಪೂರ್ತಿ ದೇವಸ್ಥಾನವನ್ನು ಶುಚಿಗೊಳಿಸಿ, ಕಪಿಲೇಶ್ವರ ಮಹಾದೇವನಿಗೆ ರುದ್ರಾಭಿಷೇಕ ಮಾಡಿ ಆಮೇಲೆ ಎಲ್ಲರ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ ನಮ್ಮ ಇನ್‍ನ್ಯೂಸ್ ಜೊತೆಗೆ ಮಾತನಾಡಿದ ಅರ್ಚಕರಾದ ನಾಗರಾಜ್ ಕಟ್ಟಿ ಕೇತುಗ್ರಸ್ತ ಸೂರ್ಯ ಗ್ರಹಣ ಹಿನ್ನೆಲೆ ಇದು ಅಮವಾಸ್ಯೆ ಮುಗಿದ ಮೇಲೆ ಮೋಕ್ಷ ಇದೆ. ಹೀಗಾಗಿ ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಭಕ್ತರಿಗೆ ಏನಾದ್ರೂ ಭಯ ಉಂಟಾದ್ರೆ ತಮ್ಮ ಮನೆಯಲ್ಲಿ ಅಥವಾ ದೇವಸ್ಥಾನಕ್ಕೆ ಬಂದು ತಮ್ಮ ಇಷ್ಟದ ದೇವರನ್ನು ಜಪಿಸಬಹುದು ಎಂದು ಕಿವಿಮಾತು ಹೇಳಿದರು. ಬೈಟ್: ವಾ.ಓ: ಒಟ್ಟಿನಲ್ಲಿ ಕಪಿಲೇಶ್ವರ ಮಂದಿರದಲ್ಲಿ ಮಹಾದೇವನಿಗೆ ಸೂರ್ಯಗ್ರಹಣ ಹಿನ್ನೆಲೆ ಬಿಲ್ವಪತ್ರೆಗಳಿಂದ ಮುಚ್ಚಲ್ಪಟ್ಟಿದ್ದು ವಿಶೇಷವಾಗಿತ್ತು.
Laxmi News 24×7