ಬೆಳಗಾವಿಯ ಶಿವಾಜಿ ನಗರದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯ ಬರ್ಬರ ಹತ್ಯೆ ಕೇಸ್‍ಗೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಇದೇ ಅಕ್ಟೋಬರ್ 19ರಂದು ಬೆಳಗಾವಿಯ ಶಿವಾಜಿ ನಗರದ 5ನೇ ಕ್ರಾಸ್‍ನ ಪ್ರಜ್ವಲ್ ಶಿವಾನಂದ ಕರಿಗಾರ ಎಂಬ 16 ವರ್ಷದ ಬಾಲಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿ ಶವವನ್ನು ಮುಚ್ಚಂಡಿ ಗ್ರಾಮದ ಬಳಿ ಹಂತಕರು ಎಸೆದು ಹೋಗಿದ್ದರು. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಅಲ್ಲದೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ನಿನ್ನೆಯಷ್ಟೇ ಶಿವಾಜಿ ಗಲ್ಲಿಯ ನಿವಾಸಿಗಳು ಹಾಗೂ ಮೃತ ಬಾಲಕ ಪ್ರಜ್ವಲ್ ಕುಟುಂಬಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದರು.
ಕ್ಯಾಂಪ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೆÇಲೀಸರು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಗೆ ವಯಕ್ತಿಕ ದ್ವೇಷವೇ ಕಾರಣ ಎಂದು ತಿಳಿದು ಬಂದಿದ್ದು. ಈ ಪ್ರಕರಣದ ಕೊಲೆ ಆರೋಪಿ ಖನಗಾಂವ ಬಿ.ಕೆ ಗ್ರಾಮದ 19 ವರ್ಷದ ಲಕ್ಷ್ಮಣ ಯಲ್ಲಪ್ಪಾ ಹೊಸಮನಿ ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
Laxmi News 24×7