Breaking News

ರಾಜ್ಯೋತ್ಸವ: ಅದ್ಧೂರಿ ಆಚರಣೆಗೆ ಸೂಚನೆ

Spread the love

ನಿಪ್ಪಾಣಿ: ‘ಈ ಬಾರಿ ರಾಜ್ಯೋತ್ಸವವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ. ಎಲ್ಲರೂ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತನ್ನಿ’ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಕರೆ ನೀಡಿದರು.

ಇಲ್ಲಿನ ನಗರಸಭೆಯಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಮತ್ತು ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು.

 

‘ಎಲ್ಲ ಇಲಾಖೆಯ ಕಾರ್ಯಾಲಯಗಳನ್ನು ಅಲಂಕರಿಸಿ ಹಬ್ಬದ ವಾತಾವರಣ ಸೃಷ್ಟಿಸಬೇಕು. ಅ.28ರಂದು ರಾಜ್ಯದಾದ್ಯಂತ ನಡೆಯುವ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅ.27ರಂದು ಪೂರ್ವಾಭ್ಯಾಸ ನಡೆಸಬೇಕು. ನಾನೂ ಪಾಲ್ಗೊಳ್ಳುವೆ. ಇದಕ್ಕಾಗಿ ಸ್ಥಳ ಹಾಗೂ ಸಮಯ ನಿಗದಿಪಡಿಸಿ. ಎಲ್ಲ ಇಲಾಖೆಗಳು ರೂಪಕಗಳನ್ನು ಪ್ರದರ್ಶಿಸಬೇಕು’ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ‘ಮೆರವಣಿಗೆಗೆ ಸಕಲ ವ್ಯವಸ್ಥೆ ಮಾಡಿಕೊಳ್ಳಿ. ಮೊದಲ ಅತ್ಯುತ್ತಮ ಮೂರು ರೂಪಕಗಳಿಗೆ ಜೊಲ್ಲೆ ಗ್ರುಪ್‍ನಿಂದ ಆಕರ್ಷಕ ಬಹುಮಾನ ನೀಡಲಾಗುವುದು’ ಎಂದರು.

ತಹಶೀಲ್ದಾರ್‌ ಪ್ರವೀನ ಕಾರಂಡೆ ಮಾತನಾಡಿ, ‘ಪೂರ್ವಭಾವಿ ಸಭೆಗೆ ಗೈರಾದ ಹಾಗೂ ರಾಜ್ಯೋತ್ಸವದಲ್ಲಿ ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಬಾರಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದೇ ಬಣ್ಣದ ಉಡುಪು ಧರಿಸಲಿದ್ದಾರೆ’ ಎಂದರು.

ಶಹರ ಪೊಲೀಸ್ ಠಾಣೆಯ ಪಿಎಸ್‍ಐ ಕೃಷ್ಣವೇಣಿ ಗುರ್ಲಹೊಸುರ ಮಾತನಾಡಿ, ‘ಕನ್ನಡಪರ ಸಂಘಟನೆಗಳು ಬೇರೆ ಬೇರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳದೆ, ಒಗ್ಗಟ್ಟಾಗಿ ಕಾರ್ಯಕ್ರಮ ಮಾಡಿದರೆ ಸೂಕ್ತವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ