Breaking News

H.I.V.ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 2019ರಲ್ಲಿ ಜಾರಿಗೆ ಬಂದರು ಅದರ ಉಪಯೋಗ ಆಗುತ್ತಿಲ್ಲ: ನಿಶಾ ಗುರೂರ

Spread the love

2017ರ ಎಚ್‍ಐವಿ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 2019ರಲ್ಲಿ ಜಾರಿಗೆ ಬಂದರು ಅದರ ಉಪಯೋಗ ಆಗುತ್ತಿಲ್ಲ. ಆ ಕಾಯ್ದೆ ಇದೆ ಎಂಬುದೆಯೇ ಜನರಿಗೆ ಗೊತ್ತಿಲ್ಲ. ಹಾಗಾಗಿ ಅದರ ಪ್ರಚಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಗಮ ಸಂಸ್ಥೆಯ ವ್ಯವಸ್ಥಾಪಕಿ ನಿಶಾ ಗುರೂರ ಒತ್ತಾಯಿಸಿದ್ದಾರೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಶಾ ಗುರೂರ ಎಚ್‍ಐವಿ ಪೀಡಿತರನ್ನು ಸರ್ಕಾರಗಳು ಕಡೆಗಣಿಸುತ್ತಿದೆ. ಎಚ್‍ಐವಿ ರೋಗಿಗೆ ತೆಗೆದುಕೊಳ್ಳುವ ಮಾತ್ರೆ ಉತ್ತಮ ಗುಣಮಟ್ಟದ ಮಾತ್ರೆ ಆಗಿರುತ್ತದೆ. ಆದರೆ ಆದರ ತಕ್ಕಂತೆ ರೋಗಿಗಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಸರ್ಕಾರ ಬಡ ಎಚ್‍ಐವಿ ರೋಗಿಗೆ ಪೌಷ್ಟಿಕ ಆಹಾರ ನೀಡಬೇಕು. ಹಾಗೂ ಕಾಯ್ದೆಯ ಬಗ್ಗೆ ಜಾಗೃತಿ ಮಾಡಿಸಬೇಕು ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ 21 ಸಾವಿರ ಜನ ಎಚ್‍ಐವಿ ಪೀಡಿತರು ಇದ್ದಾರೆ. ಅದೇ ರೀತಿ ದೇಶಗಳಲ್ಲಿ 1 ಕೋಟಿಕಿಂತ ಹೆಚ್ಚು ಜನರಿಗೆ ಎಚ್‍ಐವಿ ಇದೆ. ಎಚ್‍ಐವಿ ಆಕ್ಟ್ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುವಲ್ಲಿ ವಿಫಲ ಆಗಿದೆ. ಅದರೆ ಸಂಗಮ ಸಂಸ್ಥೆಯಿಂದ ಜಾಗೃತಿ ಮೂಡಿಸುತ್ತಿದ್ದೇವೆ. ಮಾನಸಿಕವಾಗಿ ಕುಗ್ಗುವ ಎಚ್‍ಐವಿ ರೋಗಿಗೆ ಮಾನಸಿಕವಾಗಿ ಧೈರ್ಯ ನೀಡುವ ಕೆಲಸ ಆಗಬೇಕು ಎಂದು ನಿಶಾ ಗುರೂರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಗಮ ಸಂಸ್ಥೆಯ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

37,000 ಕೋಟಿ ಹಣ ಬಾಕಿ – ಮಾ.5 ರಂದು ಬೆಂಗಳೂರಲ್ಲಿ ಬೃಹತ್‌ ಪ್ರತಿಭಟನೆಗೆ ಗುತ್ತಿಗೆದಾರರ ಸಂಘ ಕರೆ

Spread the loveಮಡಿಕೇರಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರ  37 ಸಾವಿರ ಕೋಟಿ ಹಣ ಬಾಕಿಯಿದೆ. ಅಲ್ಲದೇ 2018 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ