Breaking News

ಹುಕ್ಕೇರಿ ಪಂಚಮಸಾಲಿ ಸಮಾವೇಶ ವಿಜಯಾನಂದ ಕಾಶಪ್ಪನವರ ಹಾಗೂ ಪೃಥ್ವಿ ಕತ್ತಿ ವಾಗ್ವಾದ

Spread the love

ಮುಂದಿನ ಬಾರಿ ಹುಕ್ಕೇರಿ ಮತ ಕ್ಷೇತ್ರದಲ್ಲಿ ಪಂಚಮಸಾಲಿಗಳನ್ನೆ ಗೆಲ್ಲಿಸಿ ಎಂದು ಕರೆ ನೀಡಿದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‍ಗೆ ಮಾಜಿ ಸಂಸದ ರಮೇಶ ಕತ್ತಿ ಪುತ್ರ ಪೃಥ್ವಿ ಕತ್ತಿ ಕೇಳಗೆ ಬಾ ಎಂದು ಸವಾಲು ಹಾಕಿರುವ ಘಟನೆ ನಡೆದಿದೆ.

ಹೌದು ಹುಕ್ಕೇರಿ ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮುಂದಿನ ಬಾರಿ ಹುಕ್ಕೇರಿ ಮತ ಕ್ಷೇತ್ರದಲ್ಲಿ ಪಂಚಮಸಾಲಿಗಳನ್ನೆ ಗೆಲ್ಲಿಸಿ ಎಂದು ಮಾಜಿ ಸಚಿವ ಎ.ಬಿ.ಪಾಟೀಲ್ ಅವರ ಹೆಸರು ತೆಗೆಯುತ್ತಿದ್ದಂತೆ ಸಭೆಯಲ್ಲಿ ಗದ್ದಲ್ಲ ಕೋಲಾಹಲ ಉಂಟಾಯಿತು.

ಈ ವೇಳೆ ಸಭಿಕರೊಂದಿಗೆ ಕುಳಿತಿದ್ದ ಮಾಜಿ ಸಂಸದ ರಮೇಶ ಕತ್ತಿ ಸುಪುತ್ರ ಪೃಥ್ವಿ ಕತ್ತಿ ಮೇಲೆದ್ದು ಕೇಳಗೆ ಬಾ ಎಂದು ಕಾಶಪ್ಪನವರ್‍ಗೆ ಸವಾಲು ಹಾಕಿದರು. ವೇದಿಕೆಯ ಕೆಳಗೆ ಕುಳಿತು ಒಮ್ಮೆಲೆ ಮೇಲೆದ್ದು ಕಾಶಪ್ಪನವರ ಮಾತಿಗೆ ವಿರೋಧ ವ್ಯಕ್ತಪಡಿಸಿದರು.

ಆಗ ಸಭಿಕರು ಅವರು ರಮೇಶ್ ಕತ್ತಿಯವರ ಮಗ ಎಂದು ಕಾಶಪ್ಪನವರ್‍ಗೆ ಹೇಳಿದರು. ಯಾರ ಮಗನಾದರೆ ನನಗೇನೂ ನಾನೂ ಸಹ ಒಬ್ಬ ಮಂತ್ರಿಯ ಮಗನೇ ಎಂದು ಕಾಶಪ್ಪನವರ ಹೇಳಿದರು. ಒಟ್ಟಿನಲ್ಲಿ ವಿಜಯಾನಂದ ಕಾಶಪ್ಪನವರ ಹಾಗೂ ಪೃಥ್ವಿ ಕತ್ತಿ ವಾಗ್ವಾದದಿಂದ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.


Spread the love

About Laxminews 24x7

Check Also

ಹುಕ್ಕೇರಿ : ಸತಿ – ಪತಿಯರಲ್ಲಿ ಸಾಮರಸ್ಯ ಕೂಡಿರಲಿ – ಯರನಾಳ ಬ್ರಹ್ಮಾನಂದ ಅಜ್ಜನವರು.

Spread the love ಹುಕ್ಕೇರಿ : ಸತಿ – ಪತಿಯರಲ್ಲಿ ಸಾಮರಸ್ಯ ಕೂಡಿರಲಿ – ಯರನಾಳ ಬ್ರಹ್ಮಾನಂದ ಅಜ್ಜನವರು. ಸತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ