ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಮತ್ತೆ 6 ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ ಪೊಲೀಸರು ಯಶಸ್ವಿಯಾಗಿದ್ದಾರೆ.
ಈವರೆಗೆ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಸಂಖ್ಯೆ 29ಕ್ಕೆ ಏರಿದೆ. ಗೋಕಾಕ ತಾಲೂಕಿನ ಬಗರನಾಳದ ಈರಣ್ಣ ಮಲ್ಲಪ್ಪ ಬಂಕಾಪುರ (26), ಶಿವಾನಂದ ರಾಮಪ್ಪ ಕಾಮೋಜಿ(22), ರಾಮದುರ್ಗ ತಾಲೂಕಿನ ಬಟಕುರ್ಕಿಯ ಆದಿಲ್‍ಶಾ ಸಿಕಂದರ ತಾಸೇವಾಲೆ (23), ಮೂಡಲಗಿ ತಾಲೂಕಿನ ಖಾನಟ್ಟಿಯ ಮಹಾಂತೇಶ ಹಣಮಂತ ಹೊಸುಪ್ಪಾರ (22), ನಾಗನೂರಿನ ಮಹಾಲಿಂಗಪ್ಪ ಭೀಮಪ್ಪ ಕುರಿ (30) ಹಾಗೂ ಸವದತ್ತಿ ತಾಲೂಕಿನ ಸುಂದರ ಶಿವಾನಂದ ಬಾಳಿಕಾಯಿ(23) ಈ ಆರು ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಇವರೆಲ್ಲರೂ ಆಗಸ್ಟ್ 7ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಪರೀಕ್ಷೆಗೆ ಎಲೆಕ್ಟ್ರಾನಿಕ್ಸ್ ಡಿವೈಸ್‍ಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದರು. ಎಲ್ಲ ಆರೋಪಿಗಳಿಂದ ಎಲೆಕ್ಟ್ರಾನಿಕ್ಸ್ ಡಿವೈಸ್, ಮೊಬೈಲ್‍ಗಳು ಹಾಗೂ ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.