ದಿನಾಂಕ 20.10.2022 ರಂದು ಖಚಿತ ಮಾಹಿತಿ ಆದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ಶ್ರೀ ನಿಂಗನಗೌಡ ಪಾಟೀಲ್ ರವರ ನೇತೃತ್ವದ ತಂಡ ಬೆಳಗಾವಿ ನಗರದ ಆಟೋ ನಗರದಲ್ಲಿ ನಿಷೇಧಿತ ಅಫೀಮ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳಾದ
1) ರೋಹಿತಾಶ್ವ ಭಗವಾನರಾಮ ಬಿಷ್ನೋಯಿ (24 ) ಸಾ: ಜೋಧಪುರ, ರಾಜಸ್ಥಾನ ಹಾಲಿ ಎಮ್.ಕೆ ಹುಬ್ಬಳ್ಳಿ, ಬೆಳಗಾವಿ
2) ರಾಜಕುಮಾರ್ ಜುಗತಾರಾಮ್ ಬಿಶ್ನೊಯಿ(22) ವರ್ಷ, ಸಾ: ಜೋಧಪುರ, ರಾಜಸ್ಥಾನ ಹಾಲಿ ರುಕ್ಮಿಣಿ ನಗರ, ಬೆಳಗಾವಿ
ಇವರನ್ನು ದಸ್ತಗಿರಿ ಮಾಡಿ ಇವರಿಂದ
1) 315 ಗ್ರಾಂ ಅಫೀಮ ಅಂದಾಜು ಬೆಲೆ ರೂ. 2,70,000/- ಹಾಗೂ
2) ಸ್ವಿಫ್ಟ್ ಡಿಜೈರ್ ಕಾರು-1
3) ಮೊಬೈಲ್ ಫೋನ್ -2
ಇವುಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಈ ಸಂಬಂಧವಾಗಿ ಪಿಐ, ಸಿಸಿಬಿ ರವರು ನೀಡಿದ ದೂರಿನ ಮೇರೆಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಹೆಚ್ಚಿನ ತನಿಖೆ ಮುಂದುವರೆದಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಇನ್ಸ್ ಪೆಕ್ಟರ್ ನಿಂಗನಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಎಚ್ಎಸ್ ನಿಸುನ್ನವರ್, ಎಸ್ ಬಿ ಪಾಟೀಲ್, ಎಂ ಎಂ ವಡೆಯರ್, ಎಸ್ ಎಂ ಭಜಂತ್ರಿ, ವೈ ಡಿ ನದಾಫ್ ರವರುಗಳ ಕಾರ್ಯವನ್ನು ಪೊಲೀಸ ಆಯುಕ್ತರು ಹಾಗೂ ಡಿಸಿಪಿ (ಕಾ.ಸು) & ಡಿಸಿಪಿ (ಅಪರಾಧ & ಸಂಚಾರ) ರವರುಗಳು ಪ್ರಶಂಸಿರುತ್ತಾರೆ.