Breaking News

ಚೇತನ್ ಹಿಂದೂ ಧರ್ಮ ಟಾರ್ಗೆಟ್ ಮಾಡೋದನ್ನ ಬಿಡಲಿ: ಚಕ್ರವರ್ತಿ ಕಿಡಿ

Spread the love

ಬಕವಿ-ಬನಹಟ್ಟಿ : ನಟ ಚೇತನ್‌ರಿಗೆ ಸಿನಿಮಾ ಮಾಡಿ ಹಿಟ್ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲ, ಬದಲಾಗಿ ಒಂದಲ್ಲ ಒಂದು ವಿಚಾರದಿಂದ ಸನಾತನ ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡುತ್ತಾ ಸದಾ ಸುದ್ದಿಯಲ್ಲಿರಬೇಕೆಂಬ ಹುಚ್ಚು ಮನಸ್ಸು ಅವರದಾಗಿದೆ. ಈಗ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರದಿಂದ ಮತ್ತೆ ವಿವಾದಎಬ್ಬಿಸಿರುವುದು ಹೊಸತೇನಲ್ಲವೆಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದರು.

 

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ಸಂದರ್ಭ ಮಾತನಾಡಿ, ಬುಡಕಟ್ಟು ಜನಾಂಗ, ಭಾರತೀಯ ಮೂಲ ಭಾರತೀಯ ಸಂಸ್ಕೃತಿ ಬೇರೆ ಎಂಬುದು ಎಡಪಂಕ್ತಿಯರ ವಾದ ಸಾಮಾನ್ಯವಾಗಿದೆ. ಇಡೀ ಜಗತ್ತು ಇದನ್ನು ತಿರಸ್ಕರಿಸಿದೆ ಆದರೂ ಈ ವಾದದಿಂದಲೇ ನೇತಾಡುವುದು ಬಿಟ್ಟರೆ ಹೋರಾಟದ ತಳಪಾಯ ತಪ್ಪುತ್ತದೆ ಎಂಬ ಕಲ್ಪನೆಯಾಗಿದೆ ಎಂದರು.

ಹಿಂದೂ ಧರ್ಮ ಎಲ್ಲವನ್ನೂ ಒಳಗೊಳ್ಳುವ ಧರ್ಮ, ಬುಡಕಟ್ಟು ಸೇರಿ ಯಾವದೇ ಸಂಸ್ಕೃತಿ ಹಿಂದೂ ಧರ್ಮದ ಅಂಗವಾಗಿದೆ. ದೇವರಗಿತಿಂತ ದೈವ ಹೆಚ್ಚು ಎಂಬುದು ಚಿತ್ರದಲ್ಲಿದೆ. ಆದರೆ ದೈವ ಮತ್ತು ದೇವರ ಪೂಜೆ ದಕ್ಷಿಣ ಕನ್ನಡದ ಜನ ಬೆಳೆಸಿಕೊಂಡು ಬಂದಿದ್ದಾರೆ. ದುರದೃಷ್ಟವೆಂದರೆ ಚೇತನ್‌ರಿಗೆ ಓದುವ ಅಥವಾ ಅರಿತುಕೊಳ್ಳಲು ಸಮಯವಿಲ್ಲ. ಅಲ್ಲಿನ ಜನರ ಸಂಸ್ಕೃತಿ ಸನಾತನ ಧರ್ಮದ ಭಾಗವಾಗಿ ಬದುಕುತ್ತಿರುವದನ್ನು ನೋಡಲಿ. ಮೂರ್ಖತನ ಬಿಟ್ಟು ಭಾರತೀಯ ಸಂಸ್ಕೃತಿಯೊಂದಿಗೆ ಒಂದಾಗಿ ಚೇತನ್ ಮುಂದುವರೆಯಲಿ. ಇವೆಲ್ಲ ಮಾತುಗಳನ್ನಾಡುವ ಮೊದಲು ಎರಡು ನಾಗರಿಕತೆಯನ್ನು ಬಿಟ್ಟು ಪಕ್ಕಾ ಭಾರತೀಯರಾಗುವುದನ್ನು ಕಲಿಯಲಿ ಎಂದರು.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ