ಫೈನಾನ್ಸ ಬ್ಯಾಂಕನ ಕೀ ಮುರಿದು ಹಣ ದೋಚಿದ ಆರೋಪಿಗಳ ಹೆಡೆಮುರಿ ಕಟ್ಟಿ ನಾಲ್ವರು ಆರೋಪಿಗಳನ್ನು ಚಿಕ್ಕೋಡಿ ಪೋಲಿಸರು ಬಂಧಿಸಿದ್ದಾರೆ.
ಚಿಕ್ಕೋಡಿ ಪಟ್ಟಣದ ಫೀನ್ ಕೇರ್ ಸ್ಮಾಲ್ ಫೈನಾನ್ಸ ಬ್ಯಾಂಕಿನ ಕೀಲಿ ಮುರಿದು 6.47,096 ರೂಗಳನ್ನು ದರೋಡೆ ಮಾಡಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.ಬಂಧಿತರನ್ನು ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ರಮೇಶ ಕುಟ್ನಪ್ಪಾ ನಾಯಿಕ(29),ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮದ ಬಸವರಾಜ ಉಮೇಶ ಕುಂಚನೂರೆ(28),ರಬಕವಿ ತಾಲೂಕಿನ ನಾವಲಗಿ ಗ್ರಾಮದ ಪರಸಪ್ಪಾ ಅಮ್ಮಾಜಿಗೋಳ (27),ನಾವಲಗಿ ತುಕ್ಕಪ್ಪಾ ದುಂಡಪ್ಪಾ ಅಮ್ಮಾಜಿಗೋಳ(26) ಎಂದು ಗುರುತಿಸಲಾಗಿದೆ.
ಬಂಧಿತರಿಂದ 2ಮೋಟಾರ ಸೈಕಲ್ ಬೈಕ್ 5 ಮೊಬಾಯಿಲ್,45 ಗ್ರಾಮ ಬಂಗಾರ,2.80 ಲಕ್ಷ ರೂಗಳ ಹಣವನ್ನು ವಶಪಡಿಸಿಕೊಳ್ಳಲಾಗಿದೆ
.ಆರೋಪಿಗಳು ಫೀನ್ ಕೇರ್ ಸ್ಮಾಲ್ ಫೈನಾನ್ಸ ಬ್ಯಾಂಕನ್ನು ಕಳ್ಳತನ ಮಾಡಿರುವ ಬಗ್ಗೆ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ.ಇನ್ನು ಮುಂದೆ ಮುದೋಳದಲ್ಲಿರುವ ಗ್ರಾಮ ಶಕ್ತಿ,ಮೂಡಲಗಿಯಲ್ಲಿರುವ ಫೀನ್ ಕೇರ್ ಸ್ಮಾಲ್ ಫೈನಾನ್ಸ ಕಳ್ಳತನ ಮಾಡಲು ಯೋಜನೆ ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.