ಬೆಳಗಾವಿಯಲ್ಲಿ ಪ್ರಾ. ಬಿಎಸ್. ಗವಿಮಠ ಅವರ ಸಮಗ್ರ ಸಾಹಿತ್ಯದ ಕುರಿತು ವಿಚಾರ ಸಂಕಿರವನ್ನು ಹಮ್ಮಿಕೊಳ್ಳಲಾಗಿತ್ತು.
ಭಾನುವಾರದಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿಯಲ್ಲಿ ಪ್ರಾ. ಬಿಎಸ್. ಗವಿಮಠ ಅವರ ಸಮಗ್ರ ಸಾಹಿತ್ಯದ ಕುರಿತು ವಿಚಾರ ಸಂಕಿರವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ. ಎಚ್‌ಬಿ ರಾಜಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಡಾ. ಸರಜೂ ಕಾಟ್ಕರ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ್ ಜಗಜಂಪಿ ಅವರು ಉಪಸ್ಥಿತರಿದ್ಧರು. ಈ ವೇಳೆ ಮಾತನಾಡಿದ ಸರಜೂ ಕಾಟ್ಕರ್ ಬೆಳಗಾವಿ ಜಿಲ್ಲೆಗೆ ರಾಜ್ಯದ ರಾಜಕಾರಣವನ್ನೇ ಬದಲಾಯಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಾಂಸ್ಕೃತೀಕ ಲೋಕದ ಧುರೀಣತ್ವವನ್ನು ಗವಿಮಠ ಅವರು ವಹಿಸಬೇಕು. ಅವರೊಂದಿಗೆ ನಾವು ಸದಾ ಇದ್ದೇವೆ. ಜಾತಿಭೇದವಿಲ್ಲದೇ ಬೆಳಗಾವಿಯ ಏಳ್ಗೆಯೇ ನಮ್ಮ ಧ್ಯೇಯವಾಗಿದೆ ಎಂದರು.