ಬೆಂಗಳೂರು: ಅಕ್ರಮ ಭೂ ನೋಟಿಫಿಕೇಶನ್ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ| ಯು.ಯು. ಲಲಿತ್ ಹಿಂದೆ ಸರಿದಿದ್ದಾರೆ.
ಶುಕ್ರವಾರ ಅರ್ಜಿ ವಿಚಾರಣೆಗೆ ಬಂದೊಡನೆ ಹಿಂದೆ ಸರಿದ ಸಿಜೆಐ, “ದೀಪಾವಳಿ ಹಬ್ಬದ ಬಳಿಕ ಬೇರೊಂದು ನ್ಯಾಯಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದೆ’ ಎಂದಿದ್ದಾರೆ.
2021ರ ಜ.27ರಂದು ಇದೇ ಪ್ರಕರಣ ಸಂಬಂಧ ಬಿಎಸ್‌ವೈ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರಿಗೆ ಸುಪ್ರೀಂ ಕೋರ್ಟ್ ಬಂಧನದಿಂದ ರಕ್ಷಣೆ ನೀಡಿತ್ತು.
2011ರಲ್ಲಿ ಖಾಸಗಿ ಹೂಡಿಕೆದಾರ ಎಂ. ಆಲಂ ಪಾಷಾ ಎಂಬವರಿಗೆ 26 ಎಕ್ರೆ ಭೂಮಿ ಹಂಚಿಕೆ ವಿಫಲವಾದ ಪ್ರಕರಣದಲ್ಲಿ ಬಿಎಸ್‌ವೈ ಮತ್ತು ನಿರಾಣಿ ವಿರುದ್ಧ ಕ್ರಿಮಿನಲ್ ವಿಚಾರಣೆ ಆರಂಭಿಸುವಂತೆ 2021ರ ಜ.5ರಂದು ರಾಜ್ಯ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಇವರಿಬ್ಬರೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.