ಬೆಳಗಾವಿ ನಗರದಲ್ಲಿ ಜೈನ ಸಮುದಾಯದ ೧೦ ಯುವಕರು ತಮ್ಮ ಸುಖ ಜೀವನವನ್ನು ತೊರೆದು ಜೈನ್ ಧರ್ಮ ದೀಕ್ಷೆಯನ್ನು ಸ್ವೀಕಾರ ಮಾಡಿದರು. ಈ ಹಿನ್ನೆಲೆ ಜೈನ ಸಮುದಾಯದ ಬಾಂಧವರ ವತಿಯಿಂದ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ನಗರದಲ್ಲಿ ಜೈನ್ ಸಮುದಾಯದ ೧೦ಜನ ಯುವಕರು ಜೈನ್ ತಮ್ಮ ಲೌಕಿಕ ಜೀವನವನ್ನು ತೊರೆದು ಜೈನ್ ದೀಕ್ಷೆಯನ್ನು ಸ್ವೀಕಾರ ಮಾಡಿದ ಹಿನ್ನೆಲೆ ಇಂದು ನಗರದಲ್ಲಿ ಜೈನ್ ಸಮುದಾಯದ ವತಿಯಿಂದ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಶೋಭಾಯಾತ್ರೆಯುದ್ದಕ್ಕೂ ಮಂಗಳ ವಾದ್ಯಗಳೊಂದಿಗೆ ಸಾಗಿದ ಜೈನ ಬಾಂಧವರು ಮಂಗಳವಾದ್ಯಕ್ಕೆ ಹೆಜ್ಜೆಹಾಕಿದರು. ಈ ವೇಳೆ ಪಾಂಗುಳಗಲ್ಲಿಯ ಜೈನ್ ಮಂದಿರದಿAದ ಪ್ರಾರಂಭವಾದ ಶೋಭಾಯಾತ್ರೆಯು, ಭೇಂಡಿ ಬಜಾರ್, ಖಡೇ ಬಜಾರ್, ರಾಮದೇವ ಗಲ್ಲಿ, ಗಣಪತಿ ಗಲ್ಲಿ, ಮೂಲಕ ಸಂಚರಿಸಿ ಮತ್ತೆ ಪಾಂಗುಳಗಲ್ಲಿಯ ಜೈನ್ ಮಂದಿರದಲ್ಲಿ ಮುಕ್ತಾಯವಾಯಿತು.
ಈ ವೇಳೆ ಕಾರ್ಯಕ್ರಮ ಕುರಿತಂತೆ ಮಾತನಾಡಿದ ಜೈನ್ ಬಾಂಧವರಾದ ರಾಜ್‌ಕುಮಾರ್ ಖೋಡಾ, ಇಂದು ಶುಕ್ರವಾರ ಬೆಳಗಾವಿಯ ಪಾಂಗುಳಗಲ್ಲಿ ಜೈನ್ ಮಂದಿರದಲ್ಲಿ ಇಂದು ಜೈನ್ ಸಮುದಾಯದ ೧೦ ಜನ ಯುವಕರು ಜೈನ್ ದೀಕ್ಷೆಯನ್ನು ಸ್ವೀಕಾರ ಮಾಡಿದ ಹಿನ್ನೆಲೆ ಇಂದು ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿಯಿತು.