ಖಾನಾಪುರ ತಾಲೂಕಿನ ಕೆರವಾಡ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಕೆರೆ ಪಾಲಾಗಿದ್ದ ಮೀನುಗಾರನ ಶವ ಪತ್ತೆಯಾಗಿದೆ.
: ಹೌದು ಇದೇ ಅಕ್ಟೋಬರ್ 11ರಂದು ಕೆರವಾಡ ಕೆರೆಯಲ್ಲಿ ಮೀನು ಹಿಡಿಯಲು ಬಲೆ ಹಾಕಲು ಹೋಗಿದ್ದ ವೇಳೆ ಕೆರೆಯಲ್ಲಿ ಮುಳುಗಿದ್ದ. ಘಟನಾ ಸ್ಥಳಕ್ಕೆ ನಂದಗಡ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಆತನ ಶೋಧ ಕಾರ್ಯ ನಡೆಸಿದ್ದರು.
ಸ್ಥಳಕ್ಕೆ ತಹಶೀಲ್ದಾರ್ ಪ್ರವೀಣ ಜೈನ್ ಕೂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು. ಬುಧವಾರ ಕೆರೆಯಲ್ಲಿ ಆತನ ಶವವನ್ನು ಹೊರ ತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಖಾನಾಪುರ ತಾಲೂಕಿನ ಮಂಗ್ಯಾನಕೊಪ್ಪ ಗ್ರಾಮದ 26 ವರ್ಷದ ಮಂಜುನಾಥ ತುಕಾರಾಂ ವಾಣಿ ಮೃತ ಮೀನುಗಾರ. ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.